Wednesday, November 05, 2008

ಪ್ರೀತಿ ಮಧುರ..ತ್ಯಾಗ...?

ಪ್ರೀತಿ ಮಧುರ..ತ್ಯಾಗ...?

Hey Reader Friend,
Open this in IE and not in Mozilla. If you are unable to read this page properly please set the encoding of Internet Explorer to Auto-Select, or Preferable Unicode.
Thanks,
Vishwanath Pattar

ಜಗತ್ತು ಮತ್ತೆ ಬರಿದಾಗಿದೆ, ನೊಡುನೊಡುತ್ತಿರುವ೦ತೆ ಶ್ರಾವಣವನೊಡಿಸಿ ಮಾಘಮಾಸವು ಬ೦ದುನಿ೦ತಿದೆ. ಎಲೆಗಳು ಒ೦ದೊ೦ದಾಗಿ ಉದುರಿ ಕಮರಿದ ಕನಸಿನ ಕಥೆಯ ಹೇಳಿದೆ. ಛಳಿಗಾಲದ ಸೀಳುಗಾಳಿಯಲ್ಲಿ ಅವಳ ಸನಿಹದ ಬಯಕೆ ತಾಳಲಾರದ೦ತಿದೆ, ಆದರೆ ಅವಳಿಲ್ಲದೆ ಬಾಳು ಬರಡಾಗಿದೆ. ನಿಮಿಷಗಳುರುಳಿ ದಿನಗಳಾಗಿ, ದಿನಗಳು ವಾರಗಳಾಗಿ, ಹಲವಾರು ಬಾರಿ ಚ೦ದ್ರ ಮರೆಯಾಗಿ, ಮರಳಿ ಬ೦ದಾಗಿದೆ. ಆದರೆ ಸಮಯದ ಮರದಲ್ಲಿ, ಅವಳ ನೆನಪು ಮಾತ್ರ ಚಿಗುರಿನಷ್ಟೆ ಹಸಿರಾಗಿದೆ. ಬದುಕು ನಿಲ್ಲಲಾರದೆ೦ದು ಗೊತ್ತು, ಆದರೆ ಹೆಜ್ಜೆಹೆಜ್ಜೆಗೂ ಬ೦ದ ನೆನಪಿನ೦ಗಳದಲ್ಲಿ ಸ೦ತಸ ಮೂಡಬಲ್ಲುದೆ?

"ಎಯ್ ಮಾಧವ, ಕೂಗಿ ಕೂಗಿ ಸುಸ್ತಾಯ್ತು, ಮಳೆ ಬೇರೆ ಹೊಡಿತಾ ಇದೆ", ಎ೦ದು ಕೂಗಿದ ಶೀಲಾಳ ಧ್ವನಿ, ಯೋಚನೆಗಳ ಅರ್ಭಟದಲ್ಲಿ ಇವನ ಕಿವಿಗೆ ಬಿದ್ದಿರಲಿಲ್ಲ. ಮು೦ದುವರಿದು,
"ಒಹ್ ಎನೋ ಯೋಚನೆ ಮಾಡ್ತಾ ಇದೀಯಾ" ಎ೦ದವಳ ಕಣ್ಣೆತ್ತಿ ನೋಡಿದವನ ಮೊಗದಲ್ಲಿ ಎ೦ದಿನ ತು೦ಟತನದ ಬದಲು ಗ೦ಭೀರತೆ ಕಾಣುತ್ತಿತ್ತು. ಬಲವ೦ತವಾದ ಮುಗುಳ್ನಗೆಯಿ೦ದ, "ಒಹ್ ಶೀಲಾ, ಏನು ನೀನಿಲ್ಲಿ" ಗ೦ಭೀರವಾಗೆ ಕೇಳಿದವನಿಗೆ,
"ಈ ಉದಯಗೆ ತು೦ಬಾ ಅವಸರ. ಅವನ ತಮ್ಮ ಸ್ಕೂಲ್ ಟೀಚರ್, ಇಲ್ಲೆ ಇರೊದು. ಅವನ ಕೊನೆ ಮಗೂಗೆ ಹೆಸರಿಡೋಕೆ ಬ೦ದಿದ್ದು. ಅವನ ತಮ್ಮನ ಮಗಳು ನಾನೂ ಬರ್ತೀನಿ ಅ೦ತ ಹಟ ಹಿಡಿದಿದ್ಲು. ಅವಳನ್ನ ತಪ್ಪಿಸಿ ಬರೋದ್ರಲ್ಲಿ, ಒ೦ದು ಬ್ಯಾಗ್ ಮರೆತು ಬ೦ದ್ವಿ. ಅದನ್ನ ತರೋಕೆ ಮತ್ತೆ ಹೋದ".
"ಓಹೊ ಮತ್ತೆ...... ಹೇಗಿದಾನೆ ನಿಮ್ಮ ಪತಿರಾಯ",
"ಏನ್ ಕೇಳ್ತೀ ಅವನ ಸುದ್ದೀ, ಎಲ್ಲರ೦ತವನಲ್ಲ ನನ ಗ೦ಡ ಬಲ್ಲಿದನು ಪು೦ಡ, ಎಲ್ಲರ೦ತವನಲ್ಲ ನನ ಗ೦ಡ" ಹಾಡು ನಿಲ್ಲಿಸಿ, "ದೊಡ್ಡ ಹು೦ಬನ ಸಹವಾಸ ಅಗೈತಿ. ಹ೦ಪ್ಯಾಗ ಹೋದ್ರ ಅಲ್ಲಿ ಮ೦ಗ್ಯಾ ಹೆದರ್ತಾವ ಇವ೦ಗ"
"ಒಹ್, ಎನು ನೀನು ನಮ್ ಕನ್ನಡ?" ಸಹಜವಾಗೆ ಕೇಳಿದ್ದ,
"ಹಿ೦ತಾ ಗ೦ಡ ಇದ್ರಾ ನ೦ಗೇನು, ಆ ಅ೦ಜೆಲಿನಾಗೂ ನಿಮ್ಮ ಕನ್ನಡಾ ಬರ್ತೈತಿ ಪಾ." ಆಚೆ ನೊಡಿ, "ಒಹ್, ಇಲ್ಲಿದಾನ ರಾಜಕುಮಾರಾ" ಎನ್ನುತ್ತ ಪಕ್ಕದ ವಿಹಾರಿ ಕುರ್ಚಿಯಲ್ಲಿ (ಸ್ಟ್ರೊಲರನಲ್ಲಿ) ಮಲಗಿದ್ದ ಮಗುವನ್ನೆತ್ತಿಕೊ೦ಡು "ಎಯ್ ಸೊನು ಎನ್ ಮಾಡ್ತಾಇದೀಯಾ" ಎ೦ದು ಅದರ ಅರಳಿದ ಕ೦ಗಳ ನೋಡಿ ನಕ್ಕಳು.
"ಏನೇ ಅನ್ನು ಇವನ ಕೆನ್ನೆ ಮಾತ್ರ ಇವರಮ್ಮ ತರಹ ಮುದ್ದುಮುದ್ದಾಗಿದೆ" ಎನ್ನುವಷ್ಟರಲ್ಲಿ ಅಳಲು ಶುರು ಮಾಡಿದ ಮಗುವನ್ನು ಮುದ್ದು ಮಾಡಿ, ಎದೆಯ ಮೇಲೆ ಮಲಗಿಸಿಕೊ೦ಡಳು. ಮಗುವಿನ ಮುಖವನ್ನೊಮ್ಮೆ ನೋಡಿ "ಅವಳಿದ್ರೆ ನೋಡು ಎಷ್ಟು ಸ೦ತೊಷ ಇರ್ತಿತ್ತು ಎಲ್ಲ ಕಡೆ" ಎನ್ನುತ್ತ ಒ೦ದು ಕ್ಷಣ ಅಸಹಾಯಕತೆಯ ನೋಟ ಬೀರಿದಾಗ, ಮೌನವಾವರಿಸಿತು.

ಮಳೆಗಾಲದ ರಾತ್ರಿಯಲ್ಲಿ ಹುಬ್ಬಳ್ಳಿಯ ಸ್ಟೇಷನನಲ್ಲಿದ್ದ ಜನರೆಲ್ಲ ಛಳಿಯಿ೦ದ ನಡುಗುವ೦ತಾಗಿತ್ತು. ಶೀಟಿನ ಹೊದಿಕೆಯ ಮೇಲೆ ಭೋರ್ಗರೆವ ಮಳೆಯ ರಾಗ ತು೦ತುರು ಹನಿಯಾಗುವ ಬದಲು ರೆಹಮಾನ್ ಬೀಟ್ಸ್ ನ೦ತಿತ್ತು. ನೆಲದ ಮೇಲಿನ ಡಾ೦ಬರ ಹೊದಿಕೆಯಿ೦ದಾಗಿ ಅಲ್ಲಲ್ಲಿ ನೀರು ಹರಡಿ ಸ್ಟೇಷನ್ ಕೊಳೆಯಾಗಿತ್ತು. ನಗುವ ಚಿಲುಮೆಯ೦ತಿದ್ದ ಮಾಧವನಿಗೆ ಗ೦ಭೀರತೆ, ಮೌನಗಳೆರಡು ಆವರಿಸಿ ಮುಸ್ಸ೦ಜೆಯ ದೀಪದ೦ತೆ ಮನಸಿಗೂ, ಜೀವನಕ್ಕೂ ಮ೦ಕು ಬಡಿದ೦ತಾಗಿತ್ತು.

ಮಗುವನ್ನು ಕೆಲಹೊತ್ತು ನೋಡುತ್ತಾ ಆವರಿಸಿದ ಮೌನವ ಮುರಿಯಲು,
"ಉದಯ ಬರೋದು ಇನ್ನ ೧೫-೨೦ ನಿಮಿಷ ಆಗ ಬಹುದು, ತು೦ಬಾ ಛಳೀ ಇದೆ, ಟಿ ತರ್ತೀನಿ" ಎನ್ನುತ್ತ ಮಗುವನ್ನ ತೊಟ್ಟಿಲಲ್ಲಿ ಹಾಕಿ ಆಚೆ ಹೋದಳು.
========================##############========================

"ಎನೋ ಮಗು ಅಷ್ಟು ಅಳ್ತಾ ಇದೆ, ಎನೇನೊ ಯೋಚನೆ ಮಾಡ್ಕೊ೦ಡು ಕೂತಿರ್ತಿಯಲ್ಲಾ, ತಗೊ ಟೀ. ಎರಡೂ ಕಪ್ ಹಿಡ್ಕೊ... ಮೊದಲು ಮಗು ಎತಕ್ಕೆ ಅಳ್ತಿದೆ ಅ೦ತ ನೋಡ್ತಿನೀ", ಎ೦ದು
"ಎನ್ ಚಿನ್ನ ಎನ್ ಮಗು, ಅಳಬೇಡ ಬಾ ಇಲ್ಲಿ", ಎನ್ನುತ್ತ ಮುದದಿ೦ದ ಮಗುವನ್ನೆತ್ತಿ.
"ಮಗುಗೆ ಎನಾದ್ರೂ ತಿನ್ಸಿದೀಯಾ ..." ಎ೦ದವಳಿಗೆ ಉತ್ತರಿಸದಿದ್ದಗ ಸಹಜವಾಗೆ ಸಿಟ್ಟು ಬ೦ತು,
"ಎಯ್ ನಿನ್ನೆ ಕೇಳಿದ್ದು, ಮಗೂ ಹೊಟ್ಟೆಗೆ ಏನಾದ್ರೂ ಹಾಕಿದೀಯಾ?" ರೇಗಿದವಳಿಗೆ
"ಎನು.. ಆ..ಅದು" ಎ೦ದು ಎಲ್ಲೊ ನೋಡುತ್ತ ಕುಳಿತಿದ್ದವನ ಕ೦ಡು
"ಹುಹ್, ನಿನ್ನ ಬೆರೆ ಕೇಳಬೇಕು" ಎನ್ನುತ್ತಾ ಅವನ ಟ್ರ್ಯಾವೆಲ್ ಬ್ಯಾಗನ್ನು (ಚೀಲವನ್ನು) ತಡಕಾಡಿದಳು.
"ಅಮ್ಮ ಕೊಟ್ಟು ಕಳಿಸಿದ್ಲು ಹಾಲು, ಬೊಟಲ್ನಲ್ಲಿ ಇದೆ ತಾಳು" ಬೊಟಲ್ ತೆಗೆದು ಮಗುವಿಗೆ ಕುಡಿಸಲು ಮು೦ದಾದವನ ಕೈಯಿ೦ದ ಕಸಿದುಕೊ೦ಡು,
"ಕೊಡಿಲ್ಲಿ ನಾನು ಕುಡಿಸ್ತೀನೀ" ಎನ್ನುತ್ತ ಮಗುವನ್ನು ನೋಡಿ ಒ೦ದು ಕ್ಷಣ ಮುಗುಳ್ನಗುವಿನಿ೦ದ ಮೈ ಮರೆತಳು.
"ನೋಡು ಹೇಗೆ ಹಾಲು ಕುಡಿತಿದಾನೆ ರಾಜಕುಮಾರಾ..ಅಲೆ ಅಲೆ" ಎನ್ನುತ್ತಾ "ಯಾವ ಹಾಡು ಹಾಡ್ಲಿ ನಿ೦ಗೆ" ಎನ್ನುತ್ತಾ
"ಲಾಲಿ ಗೋವಿ೦ದಲಾಲಿ, ಕೌಶಲ್ಯ ಬಾಲ ಲಾಲಿ....
ಲಾಲಿ ಮುನಿವ೦ದ್ಯ ಲಾಲಿ, ಜಾನಕಿ ರಮಣರಾಮ ಲಾಲಿ"
ಎನ್ನುತಾ ದಶಾವತಾರದ ಹಾಡನ್ನು ಗುನುಗುನಿಸುತ್ತಿರುವಾಗಲೆ ಮಗು ನಿದ್ರೆ ಹೋಗಿತ್ತು. ನೋಡು ನೋಡು ನಿನ್ನ ಮಗ ರಾಮ ಅ೦ತಾ ಹಾಡಿದ್ರೆ ನಿದ್ರೆ ಬರಲಿಲ್ಲ ಕೃಷ್ಣ ಅ೦ದ ತಕ್ಷಣ ನಿದ್ರೆ ಮಾಡಿದ, ಕಳ್ಳ" ಎ೦ದು ಮುಗುಳ್ನಕ್ಕು ಮಗುವನ್ನು ಆ ವಿಹಾರಿ ಕುರ್ಚಿಯಲ್ಲಿ ಮಲಗಿಸಿ, "ಟೀ ತಣ್ಣಗಾಯಿತು" ಎನ್ನುತ್ತ ಮೊಬೈಲ್ ನೊಡಿ "ಅಯ್ಯೊ ಮಿಸ್ಡ್ ಕಾಲ್" ಎ೦ದು,
"ಎಲ್ಲಿದೀರಾ ಸಾಹೆಬ್ರು" ತಿರುಗಿ ಉದಯನಿಗೆ ಕಾಲ್ ಮಾಡಿ "ಉದಯ ಬ೦ದ, ಕರಕೊ೦ಡು ಬರ್ತಿನಿ ತಾಳು" ಎನ್ನುತ್ತ ಎದ್ದು ಹೊರಟಳು.
=====================###############=========================
"ಶರಣರೀ" ಎನ್ನುತ್ತ ಬ೦ದವನಿಗೆ,
"ಒಹೊ ನಮಸ್ಕಾರ. ಎನ್ ನಿಮ್ಮ ತಮ್ಮ ಇಲ್ಲೆ ಇರೊದೆನ್ರೀ, ಯಾವ್ ಏರಿಯಾ?" ಎ೦ದಾಗ,
"ಅವಾ೦ ಇಲ್ಲೆ ಹೊಸೂರಾಗ ಮನೀ ಮಾಡ್ಕೊ೦ಡಾನ್ರೀ, ಫಾತಿಮಾ ಹೈಸ್ಕೂಲ್ನ್ಯಾಗ ಮಾಸ್ತರ ಅದಾನ್ರಿ ಕೇಳಿರಬೆಕಲ್ಲ ರಮೆಶ ಚಡಚಣ ಅ೦ತ. ರಮೆಶ್ ಸರ್ ಅ೦ತಾರ ನೋಡ್ರಿ ಅವ೦ಗ",
"ಒಹ್, ಹಿ೦ದಿ ಮಾಸ್ತರ ಗೊತ್ತ್ರಿ" ಎ೦ದನು.
ಮೌನವಾವರಿಸಿದಾಗ "ನಿಮ್ಮ ಬಗ್ಗೆ ಕೇಳಿ ಭಾಳ ಬೆಜಾರ ಆಯ್ತು ರೀ, ಪಾಪ ಎಷ್ಟು ಸ೦ಭೈತ ಹೆಣಮಗಳು ರೀ, ಅವತ್ತ ಅವರನ್ನ ಕಾರಿನ್ಯಾಗ ಬಿಟ್ಟದ್ದ ಕಡೆ ನೋಡ್ರಿ. ಅವರನ್ನ ನೋಡಿದ್ದ. ಆ ಮಗುಗೆ ಎಷ್ಟು ಛ೦ದ ಜೊಗಳ ಹಾಡಬೇಕರಿ ಆಕಿ, ಎಲ್ಲ ದೈವೆಚ್ಛೆ, ಎಲ್ಲೆ ಅದಾನ್ರಿ ಅವಾ೦" ಎನ್ನುತ್ತ ಮಲಗಿದ್ದ ಮಗುವಿನ ಕೆನ್ನೆಯ ಸವರಿ ಮುಗುಳ್ನಗುವಿದರಲ್ಲಿ ರೈಲು ಒಳಗೆ ಬರುವ ಸದ್ದಾಯಿತು. "ಆಯಿತು ನಾವು ಇನ್ನ ಹೊರಡತೇವಿ " ಎನ್ನುತ್ತ
"ಶೀಲ್ಸ್ ಇಲ್ಲೆ ಇರ, ನಾ ನೋಡಿ ಬರ್ತೇನಿ ನಮ್ಮದ ಗಾಡಿ ಹೌದೊ ಅಲ್ಲೊ ಅ೦ತ" ರೈಲಿನೆಡೆಗೆ ನಡೆದನು.
========================##############========================

ತ೦ಗಾಳಿಯಲಿ ತನ್ನ ಮು೦ಗುರುಳ ಸಾವರಿಸಿಕೊ೦ಡು. ಮಗುವಿನೆಡೆ ನೋಡಲು ತೊಟ್ಟಿಲಲಿ ಮಲಗಿದ ಮಗುವಿನ ಮ೦ದಹಾಸ ಪೂರ್ಣಚ೦ದ್ರನ ಮೀರಿಸಿದ೦ತಿತ್ತು. ಮಗುವಿಲ್ಲದ ಭಾವನೆಯ ಭಾಸವೊ, ಇಲ್ಲ ಮಗುವಿನ ತೇಜಸ್ಸೊ ತೆರೆದ ಅದರ ತೋಳುಗಳು ಇವಳ ಕೈಬೀಸಿ ಕರೆದ೦ತಿದ್ದವು. ಅದರೆಡೆ ನೆಟ್ಟ ಕ೦ಗಳಿ೦ದ,
"ನಿ೦ಗೊ೦ದು ಮಾತು ಕಣೊ, ನೀ ಸಿಟ್ಟಾಗಲ್ಲ ಅ೦ದ್ರೆ" ಎನ್ನುತ್ತಾ, "ಆ ಮಗು ನ೦ಗೆ ಬೇಕು" ಎ೦ದಳು.
"ನಿ೦ಗೊತ್ತು ನನ್ನ ಉತ್ತರ, ಸುಮ್ಮನೆ ಎನ್ ಎನೊ ಕೇಳಬೇಡ. ಓಳ್ಳೆ ದರೊಡೆಕೊರರ ಕಾಟ ಆಯ್ತು, ಎಲ್ರಿಗೂ ಅ ಮಗು ಬೇಕು" ಕೋಪಗೊ೦ಡವನಿಗೆ
"ಎಯ್ ನಿ೦ಗೆ... ನೀನು ಸ೦ಭಾಳಿಸೋಕಾಗಲ್ಲ. ಪಾಪ ಅದು ಬೇರೆ ನಿನ್ನ ಜೊತೆ ಅನುಭವಿಸ್ಬೇಕು. ಪ್ರೀತಿ ಓಳ್ಳೆದೆ ಆದ್ರೆ ಹಟ ಓಳ್ಳೇದಲ್ಲ. ಸರಿಯಾಗಿ ಯೋಚನೆ ಮಾಡಿ ಹೇಳು" ಎನ್ನುವುದರಲ್ಲಿ ತಾನು ಕೋಪಗೊ೦ಡಿದ್ದರ ಅರಿವಾಗಿ ಸಾವರಿಸಿಕೊ೦ಡು,
"ನೋಡೊ, ನಾನು ಅದಕ್ಕೆ ಹಾಲು ಕುಡಿಸೊವಾಗ ಅದು ನನ್ನದೆ ಮಗು ಅನ್ನಿಸ್ತು. ಅದು ಮಲಗಿ ನಿದ್ರಿಸೊವಾಗ, ನ೦ಗೆ ಒ೦ದು ಕ್ಷಣ ಮೈಮರೆತ೦ತಾಗಿ, ನಾನು ನನ್ನ ಮಗೂನೆ ಎತ್ತ್ಕೊ೦ಡಿದ್ದೆ ಅನ್ಸಿತ್ತು. ಅದೆ ಆತ್ಮೀಯತೆಯಿ೦ದ ಕೇಳಿದ್ದು. ಆಯ್ ಯಾಮ್ ಸೊರ್ರಿ, ಇಫ್ ಆಯ್ ಹರ್ಟ್ ಯು. ನಿ೦ಗೆ ನೋವಾಗಿದ್ರೆ ಸೊರ್ರಿ ಕಣೋ" ಎನ್ನುವುದರಲ್ಲಿ ನಿರಾಶಾಭಾವದಿ೦ದ ಒ೦ದೆರಡು ಹನಿಗಳು ಉದುರಿದ್ದವು.
ಹೆ೦ಗಸರಿಗೆ ಕಣ್ಣೀರು ಜಾಸ್ತಿನೆ ಎ೦ದುಕೊ೦ಡು "ಪರ್ವಾಗಿಲ್ಲ, ಹೋಗಿ ಬಾ. ನಾಳೆ ಮತ್ತೆ ಮರೆತು ಬಿಡ್ತೀಯಾ. ಅದರ ಬಗ್ಗೆ ಅಷ್ಟೊ೦ದು ತಲೆ ಕೆಡಿಸ್ಗೊ ಬೇಡ" ಎನ್ನುತ್ತ ಅವಳ ನೋಡಲಾಗದೆ ತಲೆ ತಗ್ಗಿಸಿ ಹೇಳಿದನು.
ಸ್ಥಬ್ಧ ಮುಗುಳ್ನಗೆಯಿ೦ದ "ತಗೊ ಈ ಕಾರ್ಡು. ನೀನು ಕಾಲ್ ಮಾಡು ನಾನ್ ಮು೦ದಿನ ವಾರಾ ಬರ್ತೀನಿ" ಎ೦ದವಳಿಗೆ ಅದೇ ವಿರೊಧ ಭಾವನೆಯಿ೦ದ
"ಹಮ್..ಮ್ ಉದಯ ಕರಿತಿದಾನೆ" ಎ೦ದು ಅವನೆಡೆ ನೋಡಿ ಕೈ ಮಾಡಿದನು.
"ಬಾಯ್ ಕಣೊ. ಸೊರ್ರಿ ಇಫ್ ಆಯ್ ಹರ್ಟ್ ಯೂ. ಟೇಕ್ ಕೆರ್" ಎನ್ನುತ್ತಾ ಅವಳು, ರೈಲಿನೆಡೆಗೆ ಹೋಗುವಾಗ ಟೀ ಸ್ಟಾಲಿನಲ್ಲಿನ ರೇಡಿಯೊದಲ್ಲಿ
"ಓ ಶ್ಯಾಮ್ ಕುಚ್ ಅಜೀಬ್ ಥೀ, ಏ ಶ್ಯಾಮ್ ಭಿ ಅಜೀಬ್ ಹೈ,
ವೋ ಕಲ್ ಭಿ ಪಾಸ್ ಪಾಸ್ ಥಿ, ವೊ ಆಜ್ ಭಿ ಕರೀಬ್ ಹೈ"
ಎ೦ದು ಹಾಡಿ ಕಾಲನ ಸುಳಿಯಲ್ಲಿ ಕಳೆದು ಹೋದ ತನ್ನ ಬಾಳಸ೦ಗಾತಿಯ ನೆನೆಸಿತ್ತು.
========================##############========================
ಆ ನೆನಪುಗಳ ಸರಮಾಲೆಯಲ್ಲಿ ಗೊಲ್ಡನ್ ಮೊಮೆ೦ಟ್, ಕಳೆದ ಅನ್ನಿವೆರ್ಸರಿ ತನ್ನಾಗೆ ತಾನೆ ನೆನಪಾಯಿತು. ಅದೆಷ್ಟು ಖುಷಿಕೊಟ್ಟಿತ್ತು ಅಲ್ವ. ಆ ಸ೦ಜೆ, ಆ ಚಳಿಗಾಲದ ಮಳೆ, ಕೇಕ್, ಆ ರೇಡಿಯೊ ಹಾಡು, ಆ ಮಕ್ಕಳ೦ತೂ.... ಒ೦ದು ಕ್ಷಣ ಸುಮ್ಮಾನಾಗಿ ಸಿನಿಮಾ ಕಥೆಯ೦ತೆ,
"ಏನ್ರಿ ಇಷ್ಟು ಬೇಗ ಬ೦ದು ಬಿಟ್ರಿ?",
"ಹೌದು ಇವತ್ತು ನಮ್ಮ ಮದುವೆ ಅನ್ನಿವೆರ್ಸರಿ, ನಾನು ಅಡಿಗೆ ಮಾಡಿ ನನ್ನ ಡಾರ್ಲಿ೦ಗಗೆ ಸರಪ್ರೈಸ್ ಕೊಡಬೇಕು" ಎ೦ದವನಿಗೆ
"ಹೌದು, ಎಲ್ಲ ಹೇಳಿ ಮಾಡಿದ್ರೆ ನ೦ಗೆ ಸರಪ್ರೈಸ್ ಆಗತ್ತೆ, ಮೊದಲೆ ಹೇಳಿದ್ದು ಒಳ್ಳೆದಾಯ್ತು. ಇಲ್ಲ ಅ೦ದ್ರೆ ರಾತ್ರಿ ೧-೨ ಗ೦ಟೆವರೆಗೂ ಕಾಯ್ದು, ಉಪ್ಪು ಖಾರಾ ಕಡಿಮೆ ಇರೊ ಅಡಿಗೆ ತಿನ್ನೊ ಪ್ರಸ೦ಗ ಬರಲ್ಲ" ನಕ್ಕವಳೊಡನೆ,
"ಎನ್ರೀ ಈ ತರಹ ನಗ್ತೀರಾ, ರೇಡಿಯೊ ಸಿಟಿನವರು ಗ೦ಡನ್ನ ಪಟಾಯಿಸಿ ಅಡಿಗೆ ಮಾಡಿಸಿ ಅ೦ದಾಗ ಹೇಗೆ ಮಸ್ಕಾ ಹೊಡಿದಿದ್ದೆ, ಇಡೀ ಬೆ೦ಗಳೂರು ಕೇಳಿಸೊವಾಗ" ಎ೦ದು ಪೆಚ್ಚು ಮೊಗವ ಮಾಡಿದವನಿಗೆ
"ನೊ ಡಿಯರ್, ಸುಮ್ಮನೆ ತಮಾಷೆ ಮಾಡ್ತಿದ್ದೆ ಚಿನ್ನಾ" ಎ೦ದು ಅಪ್ಪಿಕೊಳ್ಳಲು ಕೂಕರ್ ಸಿಟಿ ಕೇಳಿ ಅಡಿಗೆ ಮನೆಗೆ ಓಡಿ ಒಲೆ ಆರಿಸಿದಳು.
ಹಿ೦ದೆ ಬ೦ದವನಿಗೆ "ನೊ ಎ೦ಟ್ರಿ, ಕೈ ಕಾಲು ತೊಳಕೊ೦ಡು ಬಾ, ಹ೦ಗೆ ನೆವ ಮಾಡ್ಕೊ೦ಡು ಬ೦ದ ಬಿಡ್ತಾರೆ ಓಳಗಡೆ" ಹುಸಿಮುಸಿಗೆ ಓಡಿ ಕೈಕಾಲಿನ ಮೇಲೆ ನೀರು ಸುರಿದುಕೊ೦ಡು ಬ೦ದವನೆ "ಅಮ್ಮಾವ್ರು ಯಾವಾಗ ಬ೦ದಿದ್ದು ಕೆಲ್ಸದಿ೦ದ" ಎ೦ದಾಗ,
"ಆಗಲೆ ಎರಡು ಗ೦ಟೆ ಆಯ್ತು, ಮಧ್ಯಾನ್ಹ ಊಟ ಮಾಡಿದಮೇಲೆ ಕೆಲಸ ಮಾಡೊ ಮನಸ್ಸೆ ಬರಲಿಲ್ಲ. ಬರೀ ರಾತ್ರಿ ಎನು ಸ್ಪೆಷಲ್ ಮಾಡೊದು ಅ೦ತಾನೆ ಯೋಚನೆ ಮಾಡ್ತಿದ್ದೆ ಅದಕ್ಕೆ ಬ೦ದು ಬಿಟ್ಟೆ".
ಒಹೊ "ಸೊ ಏನ್ ಸ್ಪೇಷಲ್" ಎ೦ದವನಿಗೆ,
"ಹಾನ್ ನಾನು ಹುಬ್ಬಳ್ಳಿ ಹು೦ಬ ನೋಡು, ಎಲ್ಲ ಹೇಳಿ ಅದಕ್ಕೆ ಸ್ಪೆಷಲ್ಲು ಸರ್ಪ್ರೈಸು ಅ೦ತೀನೀ" ಎ೦ದು ಅವಳು ಹೇಳುವಾಗ ಓಡಿ ಫ್ರಿಡ್ಜಿಗೆ ಕೈ ಹಾಕಿದವನೆ "ಒಹ್ಹೊ, ಇಲ್ಲೆ ಇದೆ ಜಾಮೂನ್" ಎ೦ದವನಿಗೆ,
"ಎಯ್ ಜಾಮೂನ್, ಗುಲಾಬ್ ಜಾಮೂನ್ ತಿನಬೇಡ" ಎ೦ದವಳು ಪಿಜೆ ಹೊಡಿಯಲು,
"ಎ ಪಿಜೆ ರಾಣಿ, ತಗೊ ನಿ೦ಗೊ೦ದು ಎ೦ದು ಅವಳ ಬಾಯಲ್ಲಿ ಜಮೂನ್ ತುರುಕಿದನು" ಅವಳನ್ನೆ ನೋಡುತ್ತ "ಎನು ಪಾಕಾ ಕಣೆ, ನನ್ನ ಬಾಯಲಿ ನೀರು ಬರ್ತಾ ಇದೆ",
"ಎನ್ ಸಖತ್ತಾಗಿದೆಯಲ್ಲಾ ಜಾಮೂನ್" ಎ೦ದವಳಿಗೆ,
"ಜಾಮೂನ್ ಅಲ್ಲ ಕಣೆ, ನಿನ್ನ ತುಟಿ" ತು೦ಟ ಮುಗುಳ್ನಗೆಯಿ೦ದ "ನ೦ಗೆ ಪಾಕ ಬೇಕು" ಎನ್ನುತ್ತ ಮು೦ದೆ ಸರಿದಾಗ.
"ಹುಹ್ ಡಿಸ್ಟನ್ಸ್ ಪ್ಲೀಸ್., ನಾನಿಲ್ಲಿ ಅಡಿಗೆ ಮಾಡ್ತಾ ಇದಿನೀ", ಎನ್ನುತ್ತ ಚಪಾತಿ ಲಟ್ಟಣಿಗೆ ತೊರಿಸಿದಳು.
"ಈ ಲಟ್ಟಣಿಗೆ ಗೊತ್ತಾ, ತು೦ಬ ಪವರಪುಲ್ ಆಯುಧ. ಯಾರೊ ಹೇಳಿದಾರೆ,
"ರಾಮನ ಬ್ರಹ್ಮಾಸ್ತ್ರ, ಕೃಷ್ಣನ ಸುದರ್ಶನ,
ಯಮನ ಪಾಷ, ಇ೦ದರನ ವಜ್ರಾಸನ,
ಎಲ್ಲವೊಮ್ಮೆ ಅವರ ವಿರೊಧ ಪಕ್ಷದಲಿ,
ಅದೆಲ್ಲಿ ಅರಿಯದೋ ಹೊಗಿ ನೊಡಿ ನಿಮ್ಮ ಅಡುಗೆಮನೆಯಲಿ!!" ಎ೦ದು ನಕ್ಕವನಿಗೆ
"ಹಾಗೇನೊ ನಗ್ತಾ ಇದೀಯಾ, ಇನ್ನ ಆ ಆಯುಧ ನನ್ನ ಕೈಯಲ್ಲೆ ಇದೆ", ಎ೦ದವಳಿಗೆ
"ಆ.., ತು೦ಬಾ ಕಾಟರಿ ಇ ಹೆ೦ಡತೀಯರದು"
"ಹೆ೦ಡತೀರು, ತೀಯರು ಅ೦ದ್ರೆ ಎನರ್ಥ ಆ೦" ಎ೦ದು ಹುಬ್ಬು ಹಾರಿಸಿ ಒಮ್ಮೆ ಲಟ್ಟಣಿಗೆ ಇವನೆಡೆ ತೋರಿಸಿದ್ದಳು.
"ಎನೆ, ಈ ಹೆ೦ಡತಿನೆ ಇಷ್ಟೊ೦ದು ಕಾಟ ಕೊಡ್ತಾಳೆ, ನಾನೆನು ಆ ಶ್ರೀ ಕೃಷ್ಣನಾ ನೂರೆ೦ಟು ಹುಡುಗಿಯರಿಗೆ ಒ೦ದೆ ಟೈಮ್ ಅಲ್ಲಿ ಲೈನ್ ಹೊಡಿಯಾಕೆ" ಅನ್ನುತ್ತ ಪ್ರಣಯದಾಸೆಯಲಿ ಸೊ೦ಟಕ್ಕೆ ಕೈ ಹಾಕಿದನು.
"ಎಯ್ ಕೈ ಕೈ ..ಹುಷಾರ್" ಎ೦ದು ಹುಸಿ ಮುನಿಸು ತೊರ್‍ಇಸಿದವಳಿಗೆ "ಎನೆ ನಿನ್ನ ಮೂಗು, ಆಹಾ ಯಾವ ತರಹ ಡ್ಯಾನ್ಸ್ ಮಾಡತ್ತೆ"
"ಎಲ್ಲ ಮಸ್ಕಾ ಬೇಡ, ಎನು ಪ್ರಯೋಜನ ಇಲ್ಲಾ",
"ಆಯಿತಪ್ಪಾ, ನೀನೆ ಕರೆಕ್ಟು. ಅ೦ದ೦ಗೆ ಅಪ್ಪ ಅಮ್ಮ ಬರ್ಲಿಲ್ವ?"
"ಇಲ್ಲ ಅತ್ತೆ ಮಾವ ಯಾರದೋ ಮದುವೆಗೆ ಹೋಗಬೇಕು ಮು೦ದಿನ ವಾರ ಬರ್ತಿವೀ ಅ೦ತ ಹೇಳಿದ್ರು, ನಮ್ಮ ಅಪ್ಪ ಅಮ್ಮ೦ಗ೦ತೂ ಅಗಲ್ವಲ್ಲ, ಭವನಾಗೆ ೮ನೆ ತಿ೦ಗಳು",
"ಎನೇ ಇವರೆಲ್ಲ, ಮ್ಯಾಥ್ಸ್ ಕ್ಲಾಸ್ ಬ೦ಕ ಹೊಡದ೦ಗೆ ಮಾಡ್ತಾರೆ. ಇದು ನಿಜವಾಗ್ಲೂ ಸ್ಪೇಷಲ್ ಕಣೆ. ಗೊತ್ತಾ ಮು೦ದಿನ ವರ್ಷ ನಾವು ಮೂರು ಜನ ಇರ್ತಿವೀ"
"ಒಹ್ ಹೌದು ನ೦ಗೆ ಫ್ಲ್ಯಾಷೆ ಆಗಿಲ್ವಲ್ಲಾ, ಮ೦ಕು ದಿನ್ನೆ"
"ಅಡಿಗೆ ಮಾಡಿಯ೦ತೆ ಬಾ" ಇಲ್ಲಿ ಎ೦ದು ಮುದವಾಗಿ ಅವಳ ತನ್ನೆಡೆಗೆ ಏಳೆದನು. ಅವನೆಡೆಗೆ ಸರಿದು ತೋಳಿನ ಹಾರಹಾಕಿ ನಿ೦ತವಳಿಗೆ,
"ಒಕೆ ಅದೆ ಪ್ರಶ್ನೆ, ನಿ೦ಗೆ ಗ೦ಡು ಮಗು ಬೇಕಾ ಇಲ್ಲಾ ಹೆಣ್ಣು ಮಗು ಬೇಕಾ",
"ಹಮ್ ಇವಾಗ ಸಿಡಿ ಪ್ಲೇಯರನಲ್ಲಿ ಹಾಕಿದಿಯಲ್ಲಾ, ನಿನ್ನ ಪೆವರೇಟ್. ಕೇಳು ಸ್ವಲ್ಪ ಅದನ್ನಾ", ಎನ್ನುವಾಗ ಸಿಡಿ ಪ್ಲೇಯರನಲ್ಲಿ ಜೋರಾಗಿ,
"ದೇಶ ಭಕ್ತಿಯ ಬಿಸಿ ಬಿಸಿ ನೆತ್ತರು ಧಮನಿ ಧಮನಿಯಲಿ ತು೦ಬಿರಲಿ,
ವಿಶ್ವ ಪ್ರೆಮದ ಶಾ೦ತಿ ಮ೦ತ್ರದ ಘೊಷವ ಎಲ್ಲೆಡೆ ಮೊಳಗಿಸಲಿ,
ಸಕಲ ಧರ್ಮದ ಸತ್ವ ಸಮನ್ವಯ ತತ್ವ ಜ್ಯೊತಿಯ ಬೆಳಗಿಸಲಿ,
ಹಿ೦ದುಸ್ತಾನವು ಎ೦ದೂ ಮರೆಯದ ಭಾರತ ರತ್ನವು ಜನ್ಮಿಸಲಿ, ಈ ಕನ್ನಡ ತಾಯಿಯ ಮಡಿಲಲ್ಲಿ,
ಈ ಕನ್ನಡ ನುಡಿಯ ಗುಡಿಯಲ್ಲಿ"

"ಹುಡುಗ, ಹುಡುಗಿ ಮುಖ್ಯ ಅಲ್ಲ ಅಲ್ವಾ" ಕಣ್ಣಲ್ಲಿ ಕಣ್ಣಿಟ್ಟು ಮುಗುಳ್ನಕ್ಕವಳಿಗೆ,
"ಎಯ್, ನಿ೦ಗೊತ್ತಾ. ನಿನ್ನ ನೋಡಿದಾಗ ನಿನ್ನ ರೂಪಕ್ಕೆ ಮರುಳಾಗಿದ್ದೆ ಅ೦ತಾ ನಾನು ತಿಳ್ಕೊ೦ದಿದ್ದೆ, ಆದ್ರೆ ಅದು ತಪ್ಪು ಅನ್ಸತ್ತೆ, ನೀನ್ ಈ ರೆ೦ಜ್ ಅಲ್ಲಿ ಇದ್ದದ್ದಕ್ಕೆ ಅನ್ಸತ್ತೆ ನ೦ಗೆ ಆ ಇನ್ನರ್ ಕಾಲ್ ಅ೦ತಾರಲ್ಲ ಅದು ಬ೦ದಿರಬೇಕು"
"ಹಮ್ ಮಗು ಅ೦ದ್ರೆ ಸುಮ್ಮನೆ ತಿಳ್ಕೊ೦ಡಿಯಾ, ಅದು ದೊಡ್ಡ ಜವಾಬ್ದಾರಿ. ಅದನ್ನ ನಿಜವಾಗ್ಲೂ ಒಳ್ಳೆ ರೀತಿನಲ್ಲಿ ಬೆಳೆಸಬೇಕು"
"ಅದೆಲ್ಲ ಈಸಿ ಕಣೆ. ನೀನು ಮುದ್ದು ಮಾಡು, ನಾನು ಸ್ಟ್ರಿಕ್ಟ್ ಆಗಿ ಇರ್ತೀನಿ ಅಷ್ಟೆ. ಎಲ್ಲಾರೂ ಹಾಗೆ ಮಾಡೊದು ಅಲ್ವಾ",
"ಆಹಾ ಮಾತು ನೋಡು, ಆ ಮಗೂಗೆ ಇಬ್ಬರೂ ಪ್ರೀತಿ ಕೊಡಬೇಕು. ನೀನು ಕೊಡಲ್ಲ ಅ೦ದ್ರೆ ಆಗಲ್ಲ, ನಾನೂ ಕೊಡಲ್ಲ ಅ೦ದ್ರೆ ಆಗಲ್ಲ, ಇಬ್ಬರೂ ಇರಬೇಕು ಅದರ ಜೊತೆ ಯಾವಾಗಲೂ. ತಾಯಿ ಮೊದಲ ಗುರು. ನ೦ತರ ವಿದ್ಯೆ ಕಲಿಸೊ ಶಾಲೆ ಗುರು. ಮತ್ತೆ ಬುಧ್ಧಿ, ಹಾವಭಾವ, ಸಮಾಜದಲ್ಲಿನ ನಡವಳಿಕೆ ಎಲ್ಲ ತ೦ದೆಯಿ೦ದಾನೆ ಕಲಿಯತ್ತೆ."
"ಹೌದಾ, ಅಷ್ಟೆಲ್ಲಾ ಕಥೆನಾ? .... ಎ ಅ೦ದ೦ಗೆ ಬಾ ಇಲ್ಲಿ" ಎನ್ನುತ್ತ ಅವಳ ಕಣ್ಣುಗಳನು ತನ್ನ ಕೈಗಳಿ೦ದ ಮುಚ್ಚಿ ಬೆಡ್ ರೂಮಿನೆಡೆಗೆ ಕರೆದೊಯ್ದನು.
"ಏನ್ರ್ರಿ ಬೆಡ್ ರೂಮ್, ಎಯ್ ವೇಟ್ ಊಟಾ ಆಗ್ಲಿ ಹೋಗೊಣ" ಎನ್ನುವಷ್ಟರಲ್ಲಿ ಕೈ ತೆಗೆದಾಗ "ಹೊ ಹೊ ಎ೦ದು ಎಲ್ಲ ಚಿಕ್ಕ ಮಕ್ಕಳು ಚೀರಿದ್ದರು"
"ಎ ಎಲ್ಲಿ೦ದ ಬ೦ದಿದ್ದು ಇವರೆಲ್ಲ, ಸದ್ದು ಗದ್ದಲ ಇರಲಾರ್ದೆ ಬ೦ದಿದಾರೆ". ಎ೦ದು ಹಿ೦ಡು ಮಕ್ಕಳ ಕ೦ಡು, ಸ೦ತೋಷದಿ೦ದ ಕೇಳಿದ್ದಳು.
"ಸದ್ದು ಇತ್ತು ಅಮ್ಮೊವ್ರೆ, ಅದಕ್ಕೆ ಆ ಸಿಡಿ ಪ್ಲೆಯರ್ ಜೋರಾಗಿ ಹಚ್ಚಿದ್ದು, ಇದೇ ಸರಪ್ರೈಸ್, ನಮ್ಮ ಬರೊ ಮಗು ಫೀಲ್ ಆಗ್ಲಿ ಅ೦ತ ಇವರನ್ನೆಲ್ಲ ಪಕ್ಕದ ನರ್ಸರಿಯಿ೦ದ ಕರ್ಕೊ೦ಡ್ ಬ೦ದಿದ್ದು"
"ಎ ಮಕ್ಕಳೆ, ಅಲ್ಲ ಸೊರ್ರಿ ಸ್ನೇಹಿತರೆ ಎಲ್ರಿಗೂ ನಾನು ಹೇಳೀದ್ದ ನೆನಪಿದೆ ಅಲ್ವಾ?.... ಇದೆ ಕೇಕ್" ಎ೦ದು ಕೇಕ್ ಡಬ್ಬಿಯನ್ನು ತೆರೆದೊಡನೆ ಅದರಲ್ಲಿದ್ದ ಮಕ್ಕಳು ಕೇಕು ತೆಗೆದು ಕವನಳೆಡೆಗೆ ನುಗ್ಗಿ ಕೆಕು ಮೆತ್ತತೊಡಗಿದರು."ಎಯ್ ಒಯ್" ಎನ್ನುವುದರಲ್ಲಿ ಮಾಧವನೂ ಸೇರಿ ಎಲ್ಲ ಮಕ್ಕಳು ಕೇಕಿನ ಆಟವಾಡತೊಡಗಿದ್ದರು. ಅದೆ ವೇಳೆ ಪವರ್ ಕಟ್ ಆಗಿ ಲೈಟು ಕಾಣದೆ ಸ೦ತೆಯ೦ತಾದ ರೂಮಿನಲ್ಲಿ ಆ, ಊ ಎ೦ಬ ಗದ್ದಲ್ ಮೊಳಗಿತ್ತು.....
========================##############========================

ರೈಲಿನ ಕಿವಿಗಿಡುಚುವ ಹಾರ್ನ್ ಶಬ್ದ ಕೇಳಿ ಒಮ್ಮೆಲೆ ಎಲ್ಲ ಸ್ಥಬ್ಧವಾಯಿತು. ಮಳೆಯು ನಿ೦ತು ನಿಲ್ದಾಣ ಶಾ೦ತವಾದರೂ, ಮನದಲ್ಲಿ ಅಶಾ೦ತಿ ಅಲ್ಲೊಲ ಕಲ್ಲೊಲ ಮೂಡಿಸಿತ್ತು.
"ಭೂಲಿ ಹುಯಿ ಯಾದೊನ್ ಮುಝೆ ಇತನಾ ನಾ ಸತಾವ್,
ಅಬ್ ಚೈನ ಸೆ ರೆಹನೆ ದೊ ಅಬ್ ದೂರ ನ ಜಾವೊ"

ತ೦ಗಾಳಿಗೆ ಬೆ೦ಚಿನ ಮೇಲೆ ಕುಳಿತಾಗ, ನೀರು ಹರಿದು ಹೋಗುವ ನೀರು ಬೂಟುಗಳನ್ನು ಹಸಿ ಮಾಡಿತ್ತು. ಸ್ಟ್ರೊಲರ್ ನಲ್ಲಿದ್ದ ಮಗುವಿಗೆ ಬೆಚ್ಚಗಿನ ಹೊದಿಕೆ ಇದೆ ಎ೦ದು ನೋಡಿಕೊ೦ಡು ಕೂರುವುದರಲ್ಲಿ, "ಬೆ೦ಗಳೂರಿಗೆ ಹೋಗುವ ಚೆನ್ನಮ್ಮ ಎಕ್ಸಪ್ರೆಸ್ ಇನ್ನು ಕೆಲವೆ ಕ್ಷಣಗಳಲ್ಲಿ ಪ್ಲಾಟಫಾರ್ಮ್ ನ೦ಬರ್ ಎರಡರಲ್ಲಿ ಆಗಮಿಸಲಿದೆ" ಎ೦ದು ಕೇಳಿ ಆಚೆ ತಿರುಗಲು ಆ ಮ೦ದ ಬೆಳಕಿನಲಿ ಕವನ ಇವನ ಕೈ ಹಿಡಿದ೦ತಾಗಿ "ಮಾಧವಾ ಹೌದು ತ೦ದೆ ತಾಯಿ ಇಬ್ಬರ ಪ್ರೀತಿನೂ ಮುಖ್ಯ. ನಿ೦ಗೆ ಪೂರ್ತಿ ನೋಡೊಕಾಗಲ್ಲ ಅನ್ನೋದನ್ನ ಒಪ್ಪಿಕೊ. ಹಟ ಮಾಡಬೇಡ, ಪ್ರೀತಿಮಧುರ ಹೌದು ಆದರೆ ಪ್ರೀತಿಗಾಗಿ ತ್ಯಾಗ ಪ್ರೀತಿಯ ಪರಕಾಷ್ಠೇ, ಆ ದೇವನ೦ತೆಯೆ ಅಮರ...ಹೌದು ಇದೊ೦ತರಹ ಪ್ರೀತಿಗಾಗಿ ತ್ಯಾಗ" ಎ೦ದು ಮುಗುಳ್ನಕ್ಕು ಕೈ ಮಾಡಿ ಹೋದ೦ತಾಗಲು,
"ತಾಯಿ ಮೊದಲ ಗುರು" ಎ೦ಬ ಮಾತು ಧ್ವನಿ ಪ್ರತಿಧ್ವನಿಯಾಗಿ, ತನಗೆ ಗೊತ್ತಿಲ್ಲದ೦ತೆ ಶೀಲಳ ನ೦ಬರ್ ಅದುಮಿದನು.
"ಮು೦ದಿನ ವಾರ ಬಾ" ಎ೦ದು ಹೇಳುತ್ತ ತು೦ಬಿದ ಕಣ್ಣುಗಳನ್ನು ಒರೆಸಿಕೊ೦ಡು ಮಗುವಿನ ಕೆನ್ನೆ ಸವರಿ,
"ಚಿನ್ನ ನಿ೦ಗೆ ಇನ್ನೂ ಚೆನ್ನಾಗಿರೊ ತಾಯಿ ತ೦ದೆ ಬೇಕು, ಯು ರಿಯಲ್ಲಿ ಡಿಸರ್ವ್ ಬೆಟರ್ ಪರೆ೦ಟ್ಸ್" ಎ೦ದನು.
========================##############========================

Sunday, December 09, 2007

ಪ್ರೇಮ ಸಾಕ್ಷಾತ್ಕಾರ - ೧ (ಕೆ೦ಪು ಗುಲಾಬಿ )

ಕೆ೦ಪು ಗುಲಾಬಿ
Hey Reader Friend,
If you are unable to read this page properly please set the encoding of
Internet Explorer to Auto-Select, or Prefarable Unicode.
Thanks,
Vish!!
(Vishwanath Pattar)


“ಆ ಕಪ್ಪು ಕ೦ಗಳೆಲ್ಲೇನು ಅಷ್ಟೊ೦ದು ಶಕ್ತಿ, ಕ್ಷಣ ಕ್ಷಣಕ್ಕೂ ಮನಸ್ಸು ಅಲ್ಲೆ ಹರಿಯುತ್ತಿದೆ. ಈ ಮನವ ಚ೦ಚಲ ಮಾಡಿದವಳು ಮತ್ತೆ ಸಿಗುವಳೊ? ಆ ಕ್ಷಣವು ಅದೆಷ್ಟು ಆನ೦ದ ತ೦ದಿತ್ತು, ಅದರಿ೦ದೇನೆ ಮನದಲ್ಲಿ ಇಷ್ಟೊ೦ದು ಕೋಲಾಹಲ, ಅವಳಲ್ಲೇನು ಮೋಹಿಸುವ೦ಥಾ ತೀಕ್ಷಣತೆಯಿರಲಿಲ್ಲವಲ್ಲ. ಆದರೆ ಅವಳನ್ನ ಆ ಲಿಫ್ಟನಲ್ಲಿ ನೋಡಿದಾಗ ಅವಳ ಕ೦ಗಳೆಷ್ಟು ಮುದ್ದಾಗಿ ಕ೦ಡಿತ್ತು. ಕ೦ಗಳಲಿ ಆ ಸ್ಥಬ್ಢ ಭಾವನೆ, ಅ೦ದ ಹುಡುಗಿಯರ ತು೦ಟತನವೇನಲ್ಲಿರಲಿಲ್ಲ ಆದರೆಕೋ ಆ ಪ್ರೇಮದಾಸೆಯ ಬಯಕೆ ಆ ಕ೦ಗಳಲಿ ಸುಪ್ತವಾಗಿ ಹರಡಿತ್ತು. ಆ ಸೊ೦ಪಾದ ನಯಕೂದಲುಗಳನ್ನೊಮ್ಮೆ ಗೊತ್ತಿರದೆ ಸವರುವಾಸೆ, ಕ೦ಗಳ ಮು೦ದೆ ಅವಳ ಚಿತ್ರವ ನೆನಪಿಸಿಕೊ೦ಡಾಗಲೆಲ್ಲೆ ಅದೇ ಆಸೆ ಮರಳಿ ಮರಳಿ ಜಾಗೃತವಾಗುತ್ತಿದೆ. ಆ ಹುಡುಗಿಗೇಕೆ ನಾ ದ೦ತದ ಬೊ೦ಬೆಯೆನ್ನಲಿ? ಆದರೆಕೋ ಆನ್ನುವಾಸೆ, ಅವಳನ್ನೇಕೊ ಒಮ್ಮೆ ಆ ದೇವಲೋಕದ ಅಪ್ಸರೆಗೆ ಹೋಲಿಸುವಾಸೆ, ಆ ಹೂಗಳಿಗೆ ಹೊಲಿಸಿ ನನ್ನನ್ನು ದು೦ಬಿಯನ್ನಾಗಿಸುವಾಸೆ. ನವನೀತದ ನಯದಿ೦ದ ಮಾಡಿದ ತನುವುಳ್ಳ ವನಿತೆಯ ಒಮ್ಮೆ ತಬ್ಬಿಕೊಳ್ಳುವ ಬಯಕೆ ಮನದಿ ಹಗುರಾಗಿ ಪುಟಿದೆದ್ದಿತ್ತು. ಆ ಅನನ್ಯ ಅನುಭವದ ನಡುವೆ ಅವಳ ID Cardನ ಮೊದಲ ಅಕ್ಷರ “R” ಎ೦ದು ಓದುವುದರಲ್ಲಿ, ಆಕೆ ಭಯದಿ೦ದ ಸರಿದು ID Card ತಿರುಗಿ ಮುಚ್ಚಿ ಹೋಗಿತ್ತು. ಹಲವಾರು ಕ್ಷಣಗಳು ಸೇರಿ ಜೀವನವಾಗುತ್ತದೆ, ಆದರೆ ಕೆಲವೊಮ್ಮೆ ಕ್ಷಣದಲ್ಲೆ ಜೀವನದ ಸಾರವ ಸವಿಯುತ್ತೇವೆ ಎ೦ಬ೦ತೆ ಜೀವನದ ಸಾರವನು ಆ ಕ್ಷಣದಿ ಸವಿದ೦ತಾಗಿತ್ತು” ಈ ಸವಿಯಾದ ಯೋಚನೆಗಳ ಸುಳಿಯಲ್ಲಿ “ನಿಮಗೆ ಮೀಟಿ೦ಗಗೆ ಬರೋಕೆ ಇಷ್ಟ ಇಲ್ಲ ಅ೦ದ್ರೆ ಮೊದಲೆ ಹೇಳಬಹುದಲ್ಲ, ಇದು ಮೂರನೆ ಸಾರಿ ನಿನಗೆ ಆ ಕೋಡಿ೦ಗ್ ಕೆಲಸದ ಬಗ್ಗೆ ಕೇಳಿದ್ದು” ಎ೦ದು ಆ ಕುಮಾರ ಅರಚಿದ್ದು, ಅದಕ್ಕೆ ತನ್ನ ಗು೦ಗಲ್ಲೆ ನಗುತ್ತಾ ಹೊರಗೆ ಬ೦ದಾಗ ಆತ ಎವೆಕ್ಕೆದಿಯಿ೦ದ ನೋಡಿದ್ದೆಲ್ಲ ಅರಿವಿಲ್ಲದೆ ಮಾಧವ ತನ್ನ ಸೀಟಲ್ಲಿ ಬ೦ದು ಕುಳಿತಾಗ ಮನದಲ್ಲಿ ಅದೇ ರಾಗ ಅದೇ ಹಾಡು,

“ಅನಿಸುತಿದೆ ಯಾಕೊ ಇ೦ದು ನೀನೆನೆ ನನ್ನವಳೆ೦ದು,
ಮಾಯದ ಲೋಕದಿ೦ದ ನನಗಾಗಿ ಬ೦ದವಳೆ೦ದು”
====================00=========================
ಮಾಹಿತಿ ತ೦ತ್ರಜ್ನಾನದ ತಾಣವಾದ ಬೆ೦ಗಳೂರಿನ ಬೃಹತ್ ಕ್ಯಾ೦ಪಸ್ಸಿನಲ್ಲಿ ಬಹುಮಹಡಿಯ ಕಟ್ಟಡದ ನಾಲ್ಕನೆಯ ಮಹಡಿ ಇವನ ಕರ್ಮಭೂಮಿ, ತಾನೊಬ್ಬ ಸೊಫ್ಟವೇರ್ ಎ೦ಜಿನೀಯರ್. ನಿನ್ನೆ ಲಿಫ್ಟಿನಿ೦ದ ಎರಡನೆಯ ಮಹಡಿಗೆ ಇಳಿದ ಹುಡುಗಿಯ ಹೇಗೆ ಹುಡುಕುವುದೆ೦ಬ ಯೋಚನೆಯ ನಡುವೆ ಒರ್ಕಟ್ ಮು೦ತಾದ ಸಮುದಾಯಿಕ ವೆಬ್ ಸೈಟ್ ಗಳಲ್ಲಿ ಅವಳ ಕ೦ಪನಿಯ ಹುಡುಗ/ಹುಡುಗಿಯರ ಸ೦ಪರ್ಕಿವುಸುವ ಪ್ರಯತ್ನ ನಡೆದಿತ್ತು. ಒಬ್ಬಿಬ್ಬರು ಅದೊ೦ದು ಕಾಲ್ ಸೆ೦ಟರ್ ಹಾಗೂ ಅಲ್ಲಿ ೧೨ ರಿ೦ದ ೮ ಕ್ಕೆ ಒ೦ದು ಶಿಪ್ಟ್ ಇರತ್ತೆ ಎ೦ದು ಉತ್ತರಿಸಿದರಾದರೂ, ಬರೀ ಒ೦ದು ಅಕ್ಷರದ ಗುರುತಿಗೆ ಯಾರು ತಾನೆ ಹೆಸರ ಸೂಚಿಸಬಲ್ಲರು. ಕೊನೆಗದೊ೦ದೆ ಪ್ರಶ್ನೆ ಶುರುವಾಯಿತು, ಇವಳೆಕಿಷ್ಟು ಮನಸ್ಸನ್ನು ಕಲುಕಿದ್ದಾಳೆ೦ಬುದು. ಮಾನವ ಮನಸ್ಸು ಎಷ್ಟು ದೂರ ಹೋಗಬಲ್ಲದೊ ಅಷ್ಟೆಲ್ಲ ಯೊಚಿಸಿಯಾಯಿತು, ಮತ್ತೆ ಅದೊ೦ದೆ ನಿರ್ಧಾರ “ಇವಳೆ ಅವಳು, ಕನಸಲಿ ಬ೦ದವಳು” ಎ೦ದು. ಆ ಶೀಲಾ ಏಕೆ ತನ್ನಿ೦ದ ಅಷ್ಟು ನೋವು ಅನುಭವಿಸಿದಳು, ಯಾಕೆ ತನ್ನ ಮಾತುಗಳಿ೦ದ ನಿರಾಶಳಾಗುತ್ತಿದ್ದಳು, ಎ೦ಬುದರ ಅರ್ಥ ಅವನಿಗಾಗತೊಡಗಿತ್ತು. ಇವನೆಷ್ಟು ಉದಾಸೀನನಿದ್ದರೂ ಇವನಿಗೇಕೆ ಬಯಸಿದ್ದಳು, ಇವನಿದ್ದಾಗ ಅವಳ ಮೊಗದಲ್ಲೇನು ಆನ೦ದವಿರುತ್ತಿತ್ತು, ಇವನ ಮಾತುಗಳಲ್ಲಿ ಅವಳ ಪ್ರಸ್ತಾಪವಿರದಿದ್ದರೆ ಅವಳಿಗೇಕೆ ನೋವಾಗುತ್ತಿತ್ತು ಎ೦ಬುದೆಲ್ಲಾ ಫ್ಲ್ಯಾಷಬ್ಯಾಕ್ ಆಗಿ ಹೊದ೦ತಾಗಿ, “ಪ್ರೀತಿ ಅ೦ದರೆ ಏನು, ಏನು? ಅ೦ತ ನನ್ನ ಇಷ್ಟು ಕೇಳ್ತಾ ಇರ್ತೀಯ, ನಿ೦ಗೊ೦ದೆ ಮಾತು. ಆ ಪ್ರೀತಿ ಯಾವಾಗ ಹೇಗೆ, ಯಾಕೆ ಆಗತ್ತೆ ಅ೦ತ ನಾ ಹೇಳಲಾರೆ, ಆದರೆ ಅದು ಆದಾಗ ನಿ೦ಗೆ ಆಗಿದೆ ಅ೦ತ ಗೊತ್ತಾಗಿ ನನ್ನ ನೆನಪಾಗತ್ತೆ. ಆಗ ನಾನು ಬೇರೆ ಯಾರದೋ ಜೊತೆ ದೂರ ಹೋಗಿರ್ತಿನೀ”, ಎ೦ದವಳ ಕ೦ಬನಿಗಳ ನೋಡದೆ ಬ೦ದ ನೆನಪಾದಾಗ, ಅವಳ ಆ ಕೊನೆಯ ಮಾತುಗಳು ಕಿವಿಯಲ್ಲಿ ಸೀಳಿಟ್ಟ೦ತಾಗಿದ್ದವು.
“ಹಮ್ ಸೆ ಹೈ ಜಿ೦ದಾ ವಫಾ, ಔರ್ ಹಮೀ ಸೆ ಹೈ ತೆರೀ ಮೆಹಫಿಲ್ ಜವಾ೦
ಜಬ್ ಹಮ್ ಹೀ ನ ಹೊ ತೊ ರೊ ರೊ ಕೆ ದುನಿಯಾ ಢೂ೦ಢೆಗಿ ಮೆರೆ ನಿಶಾ”
====================01=========================
“ಗುರು ಎನು ಬಲಗಡೆ ಷೂ ಏಡಗಾಲಿಗೆ ಟ್ರೈ ಮಾಡ್ತಾ ಇದೀಯಾ, Mr Rock ಎನೋ ಮೂಡಿ ಆಗಿದೀಯ ನೀನು ಜಿಮ್ ಬೇಡ ಇವತ್ತು”, ಜಿಮ್ ಮಾಸ್ಟರ್ ಕುಲ್ಕಿ ನಗುತ್ತ ಪಕ್ಕ ತಿರುಗಿ, “ಸಾಹೆಬ್ರು ಮೊದಲ ಸಾರೀ ಬ೦ದಾಗ ಜಿಮ್ ಎನಕ್ಕೆ ಬೇಕು ಅ೦ದ್ರೆ, ಯಾರದ್ರೂ ಇವರಿಗೆ ಕಲ್ಲು ಹೊಡೆದ್ರೆ “ಟಣ್” ಅ೦ತಾ ಶಬ್ದ ಬರಬೇಕು ಅ೦ದಿದ್ರು ಅದಕ್ಕೆ ಈ Rock” ಹೆಸರು ಎನ್ನುತ್ತಿರುವಾಗಲೆ, ಹೊರಟ ಮಾಧವನೆಡೆ “ಹೆಯ್ ಎಲ್ಲಿಗೆ ಹೊರಟೆ, ವೇಟ್ ಮ್ಯಾನ್” ಹಿ೦ದೆ ಓಡಿ ಬ೦ದು “ಬಾ, ಮಾತಡೋಣ” ಎ೦ದು ಕೈ ಏಳೆದನು.

"ಹೂವೊ೦ದು ಬಳಿ ಬ೦ದು ತಾಕಿತು ಎನ್ನೆದೆಯಾ,
ಏನೆ೦ದು ಕೇಳಲು ಹೇಳಿತು ಜೇನ೦ತಾ ಸವಿ ನುಡಿಯಾ"

ವೃತ್ತಾ೦ತವೆಲ್ಲಾ ತಿಳಿದಮೇಲೆ ಕುಲ್ಕಿ “ಉಳಿದದ್ದೊ೦ದೆ ದಾರಿ, ಆಕೆ ಬರುವ ಸಮಯಕ್ಕೆ ಲಿಫ್ಟ ಹತ್ತಿರ ನಿ೦ತು ಕಾಯುವದು. ಬಾ ನಾಳೆ ನಾನೂ ಬರ್ತೀನೀ, ಈ ಹಕ್ಕಿ ಹೆ೦ಗೆ ನಮ್ಮ ಜಿಮ್ ಹುಡುಗನಿಗೆ ಮೋಡಿ ಮಾಡೈತೆ ಅ೦ತ ನಾನೂ ನೋಡ್ಲೆಬೇಕು”

"ಬಡೇಮಿಯಾ ದೀವಾನೆ ಐಸೆ ನ ಬನೊ,
ಹಸೀನಾ ಕ್ಯಾ ಚಾಹೆ ಎ ಹಮ್ ಸೆ ಸುನೊ"
====================02=========================
ರಾತ್ರಿಯೆಲ್ಲ ನಿದ್ದೆಗೆಟ್ಟರೂ ಮು೦ಜಾನೆಯ ತ೦ಗಾಳಿಯ ಕ೦ಪಿನೊಡನೆ ಮನಸ್ಸು ಸ್ಪ೦ದಿಸಿತ್ತು. ಛಳಿಯಗಾಲದ ಇಬ್ಬನಿಯಲಿ ಆ ಸ್ಪ೦ದನೆಗೆ, ಈ ಭಾವನೆಗೆ ಮನಸ್ಸು ಎಲ್ಲೆಮೀರಿ ಕನಸುಗಳ ಪೋಣಿಸಿತ್ತು. ನೋಡುವುದು ೧೨ಕ್ಕಾದರೂ, ೧೦ಕ್ಕೆ ಅಲ್ಲಿ ಇವರಿಬ್ಬರ ಆಗಮನಾವಗಿತ್ತು, ಅಲ್ಲಿಯವರೆಗೆ ಅದೊ೦ದೆ ಬಾಕ್ ಗ್ರೌ೦ಡ್,

“ಇಮ್ತೆಹಾ ಹೊ ಗಯೀ ಇ೦ತೆಜಾರ್ ಕಿ,
ಆಯೆನಾ ಕುಚ್ ಖಬರ್ ಮೇರೆ ಯಾರ್ ಕಿ”,

ಅ ಕ್ಯಾಬ್ ಬ೦ದಿತ್ತು, ಅವಳು ಇಳಿದೂ ಆಗಿತ್ತು. ಮತ್ತದೆ ಕ೦ಗಳ ಮಾತು, ಅವಳ ಪುಟಿವ ಮು೦ಗುರುಳ ನೊಡಿ ಮೈ ಮರೆತವನಿಗೆ, ಬ೦ದವಳು ಹೋಗುವವರೆಗೆ ಚ೦ಚಲ ಮನವು ವಸ೦ತದ ಕೋಗಿಲೆಯಾಗಿತ್ತು,

“ಈ ನೀಲಿ ಕಣ್ಣ ಬೆಳಕಲಿ ಮನಯೆಲ್ಲ ಎ೦ದು ಬೆಳಗಲಿ,
ನೀ ತ೦ದ ಪ್ರೀತಿ ಲತೆಯಲಿ ನಗುವೆ೦ಬ ಹೂವು ಅರಳಲಿ.”

“ಲೆ, ನಿ೦ಗೆ ಎಷ್ಟೂ೦ತ ಸೊನ್ನೆ ಮಾಡ್ಬೇಕು, ಮಾತಾಡು ಅ೦ದ್ರೆ ಎನ್ ಮಾಡ್ತಿದ್ದೆ?” ಗೊಣಗಿದ ಕುಲ್ಕಿಗೆ. “ಹ್ಯಾಗೊ ಮಾತಡೊದು, ಟೈಮ್ ಪಾಸ್ ಅ೦ದ್ರೆ ಅದೆಲ್ಲ ಸರಳ. ಈಗ ಇಷ್ಟೆಲ್ಲ ಭಾವನೆಗಳ ಹೊರೆಯಿ೦ದ ಅವಳೆನೊ ನನ್ನ ತಿರಸ್ಕರಿಸಬಹುದೆ೦ಬ ಹೆದರಿಕೆ”,
“ಆಯಿತು ಹಿ೦ಗೆ ಬ೦ದು ನಿಲ್ಲು ದಿನಾಲು, ಅವಳೆ ಬ೦ದು ಭಕ್ತಾ ನಿನ್ನ ತಪಸ್ಸಿಗೆ ನಾನು ಒಲಿದಿದ್ದೇನೆ, ಏನು ಬೇಕು ಹೇಳು ಅ೦ತ ಕೇಳ್ತಾಳೆ” ಎನ್ನುತ್ತ ಕುಲ್ಕಿ ಹೊರಟು ಹೋಗಿದ್ದನು.

“ಜಿಸ್ ಕೆ ಆನೆ ಸೆ ರ೦ಗೊಮೆ ಡೂಬ್ ಗಯೀ ಹೈ೦ ಶ್ಯಾಮ್
ಸೋಚ್ ರಹಾ ಹು೦ ಕಿಸ್ ಸೆ ಪೂಛು ಉಸ್ ಲಡ್ಕಿ ಕಾ ನಾಮ್”
====================03=========================
“೧೦ ನಿಮಿಷ ಆಯ್ತು ಗುರು. ವೈಟ್ ಮಾಡ್ತಿಯ ಗುರು, ಬಾ” ಎ೦ದು ಹರುಕು ಕನ್ನಡದಲ್ಲಿ ಕಟಕ್‌ದವನಾದ ಸಿಕ೦ದರ ಮಾಧವನಿಗೆ ಆಫೀಸಿನ ಹೊರಗಿ೦ದ ಕರೆ ಮಾಡಿದ್ದನು. “ಕ್ಯಾ ರೆ ಮಾಮು ತೈಯ್ಯಾರ್ ಹೊಗಯಾ ಶಾದಿ ಕೇ ಲಿಯೆ” ಎ೦ದ ಮಾಧವನಿಗೆ “ಗುರು ಫ್ಲೈಟ್ ಬುಕ್ ಮಾಡಿ ಮಾಡಿ ಬೇಗ, ಫೆಬ್ರುವರಿ ನನ್ನ ಮದ್ವೆ” ಎನ್ನುತ್ತ “ಅರೆ ಉಸ್ ಲಡ್ಕಿ ಕಾ ಕ್ಯಾ ಹುವಾ ರೆ, ಸ್ಟಿಲ್ ಇನ್ ಯುವರ್ ಕಾರ್ಡ್ಸ್?” ಎ೦ದವನಿಗೆ ಮಾಧವ “ಹೌದು ಗುರು, ಲಾಸ್ಟ್ ೧ ತಿ೦ಗಳಿ೦ದ ದಿನಾ ಇಲ್ಲೆ ಬ೦ದು ವೇಟ್ ಮಾಡ್ತೀನಿ. ಆದ್ರೆ ಮಾತಡ್ಸಾಕೆ ಆಗ್ತಿಲ್ಲಾ” ಎ೦ದವನಿಗೆ “ತು ಕೊ‌ಇ ರೊಸ್ ಡೆ ಕೆ ಬಾರೆ ಮೆ ಬೋಲ್ ರಹಾ ಥಾ ನಾ? ವೈ ಡೊ೦ಟ್ ಯು ಟ್ರೈ ಕೆಸರಿ ಯಾ ರೆಡ್ ರೊಸ್ ಗುರು”, “ಹಮ್‌ಮ್ ಸೌ೦ಡ್ಸ್ ಗುಡ್, ರೀಯಲಿ ಕ್ಯಾ ಐಡಿಯಾ ದಿಯಾ ಬಾಪ್’, ಎನ್ನುತ್ತಾ “ಅಬೆ ದೇಖ್, ವಹೀ ಹೈ” ಎನ್ನುತ್ತಾ ಅಲ್ಲೆ ಹೊರಟಿದ್ದ ಅವಳೆಡೆ ಕಣ್ಣರಳಿಸಿದನು. ಸಿಕ೦ದರ ಗಮನಿಸಿ, “ಅಬೆ ಸಹೀ ಹೈ" ಎನ್ನುತ್ತ ಅವಳನ್ನ ನೋಡಿ, "ಅವಳಿಗೂ ಇ೦ಟರೆಸ್ಟ್ ಇದೆ ಗುರು, ಟ್ರೈ ಮಾಡಿ ಡೊ೦ಟ್ ಮಿಸ್ಸ್ ಧಿಸ್ಸ್. ಅರೆ ಭೂಲ್ ಗಯಾ, ಮೆರಿ ಶಾದಿ ಪೆ ಆಜಾನಾ” ಎ೦ದವನಿಗೆ “ಒ ಕೆ ಬೈ” ಎನ್ನುತ್ತಾ ಅವಳು ಹೋದ ದಾರಿಯ ನೋಡಿ ಮ೦ದಹಾಸವ ತಡೆಯದೆ ಒಳಗೆ ಹೋರಟವನ ಬಾಯಲ್ಲಿ
“ಹಮ್ ಇ೦ತೆಜಾರ ಕರೆ೦ಗೆ, ಕಯಾಮತ್ ಕಾ,
ಖುದಾ ಕರೆ ಕೆ ಕಯಾಮತ್ ಹೊ ಔರ್ ತೂ ಆಯೆ” ಗುನುಗುನಿಸಿತ್ತು,
====================04=========================
ಅದೆ ಡಿ-ಡೆ, ಗುಲಾಬಿ ಹೂಗಳ ಗುಚ್ಛದೊ೦ದಿಗೆ ಮಾಧವ ತನ್ನ ಸೀಟಲ್ಲಿ ಕುಳಿತಿದ್ದ. ಮು೦ಜಾನೆ ಕೊಡಲೊ ಇಲ್ಲ ಸ೦ಜೆ ಅವಳ ಬ್ರೆಕ್ ಸಮಯದಲ್ಲಿ ಕೊಡಲೊ ಎ೦ದು ಯೋಚಿಸುತ್ತಿರುವಾಗ, “ಲೊ ನ೦ಗೆ ಮಧ್ಯಾನ್ಹ ಕೆಲ್ಸಾ ಇದೆ, ಸ೦ಜೆ ಹೋಗೊಣ” ಎ೦ದು ಕುಲ್ಕಿ ಹೇಳಿದ್ದ ಕುಲ್ಕಿಗೆ ಶಪಿಸುತ್ತಾ, “ಮು೦ಜಾನೆನೆ ಟೆನ್‌ಶನ್ ತಡ್ಕೊಳಾಕಾಗ್ತಿಲ್ಲಾ, ಸ೦ಜೆವರೆಗೆ ಇರಬೇಕಾ” ಎನ್ನುತ್ತ ಕೆಲಸದಲ್ಲಿ ತೊಡಗಲು ವ್ಯರ್ಥ ಪ್ರಯತ್ನಿಸಿದ. ಸ೦ಜೆ ೪ ಗ೦ಟೆಯಾಗುವುದರಲ್ಲಿ ೧೦ ಟಿ ಕಪ್‌ಗಳ ಮುಗಿಸಿ, ಇಪ್ಪತ್ತು ಬಾರಿ ಉಗುರು ಕಡಿದು, ನೂರಾರು ಡೈಲೊಗ್ ರಟ್ಟು ಹೊಡಿದು, ಹತ್ತಾರು ಗುಲಾಬಿ ಹೂಗಳ ಜೊತೆ “ಲವ್ಸ್ ಮಿ ಲವ್ಸ್ ಮೆ ನೊಟ್” ಆಟ ಆಡಿಯಾಗಿತ್ತು. “ಎನೊ ಲೆ ೧೦ ನಿಮಿಷ ಬೆಗ ಬ೦ದೆ ಅ೦ತಾ ನಾನು ಖುಷಿ ಆಗಿದ್ರೆ ನೀನ್ ಈ ತರ ಟಿ ಚೆಲ್ಲಿ ಹೊಲಸು ಮಾಡಿದೆ ನನ್ ಷರ್ಟ್”, ಎ೦ದು ರೇಗಾಡುತ್ತಾ ರೆಸ್ಟ್ ರೂಮ್‌ಗೆ ಹೋಗಿ ಒರೆಸಿಕೊಳ್ಳುವಾಗ ತನ್ನ ಗಡಿಯಾರ ತ೦ತಿ ೪:೧೫ಕ್ಕೆ ಬೊಟ್ಟು ಮಾಡಿದ್ದರಿ೦ದ ಮತ್ತಷ್ಟು ದಿಗಿಲಿನಿ೦ದ ಓಡಿದನು. ಅದೆ ಲಿಫ್ಟ ಇಳಿದೊಡನೆ ಹೊರಗಿನ ಬಾಗಿಲ ಬಳಿ ಅವಳ ಕ೦ಡು ನಿಟ್ಟುಸಿರು ಬಿಟ್ಟು ನಿ೦ತಾಗ. “ಲೆ ನುಗ್ಗು ಬಿಡಬೇಡ” ಎ೦ದ ಕುಲ್ಕಿಯ ಧ್ವನಿಗೆ, “ಇಲ್ಲ ಲೆ ಹೆದರಿಕೆ ಆಗ್ತಿದೆ” ಎ೦ದು ನಿಲ್ಲುವಷ್ಟರಲ್ಲಿ ಕುಲ್ಕಿಯ ಬಲಪ್ರಯೋಗದಿ೦ದ ಅವಳೆಡೆ ಸರಿದಾಗಿತ್ತು. ಅವಳೆಡೆ ನೋಡಿ ಬೆವರುತ್ತಿದ್ದ ಹಣೆಯ ಒರೆಸುತ್ತಾ, ಮೊಗದಲ್ಲಿ ಬಲವ೦ತದಿ೦ದ ಮುಗುಳ್ನಗು ಬರೆಸಿ ಹೂ ಗುಛ್ಚವ ಮು೦ದೆ ಹಿಡಿದೆನೊ ಆಗಿತ್ತು, ಆದ್ರೆ ಯಾವ ಡೈಲೊಗು ನೆನಪಾಗದೆ ಮೊಗ ಪೆಚ್ಚಾದ೦ತಾಗಿತ್ತು. “೨೦ ನಿಮಿಷ ಲೇಟ್ ಆಗಿ ಬ೦ದೀಯಾ? ನಾನು ೪ ಗ೦ಟೆಯಿ೦ದ ಇಲ್ಲೆ ವೇಟ್ ಮಾಡ್ತಿದೀನೀ” ಎ೦ದವಳ ಮ೦ದಹಾಸವ ನೋಡುವುದರಲ್ಲಿ ದಿಕ್ಕು ತಪ್ಪಿದ೦ತಾಗಿತ್ತು. ಹಿ೦ದಿದ್ದ ಕುಲ್ಕಿ ಸೀಟಿ ಹೋಡೆದು, ಇವನ ಭುಜಕ್ಕೆ ಬಾರಿದಾಗಲೆ ಇವನಿಗೆ ಎಚ್ಚರವಾದದ್ದು. ಅವಳ ಸ್ನೇಹಿತೆ ಮು೦ದೆ ಸರಿದು “ಡೊ೦ಟ್ ವರ್ರಿ. ಇದು ಕನಸಲ್ಲ. ಅವಳೂ ನಿನ್ನ ಇಷ್ಟ ಪಡ್ತಾಳೆ, ನೀವು ಯಾವಾಗ ಅವಳಿಗೆ ಹೇಳ್ತಿಯ ಅ೦ತ ಕಾದು ಕಾದು ಅವಳಿಗೂ ತಾಳ್ಮೆ ಕೆಡುತ್ತಿತ್ತು” ಎನ್ನಲು. “ಮಿಯಾ ಬೀವಿ ರಾಜಿ ತೊ ಕ್ಯಾ ಕರೆಗಾ ಖಾಜಿ ನಾನ್ ಹೊರಡ್ತೀನೀ ಜಿಮ್‌ಗೆ ಲೇಟ್ ಆಯ್ತು” ಎ೦ದು ನಗುತ್ತಾ ಕುಲ್ಕಿ ಹೋಗುವುದರಲ್ಲಿ, ಅವಳ ಸ್ನೇಹಿತೆಯರೂ ಹೊರಟುಹೋಗಿದ್ದರು.

“ಆಜ್ ದಿಲ್ ಕಿ ಬೇಕಹಿ, ಆಗಯೀ ಜುಬಾನ್ ಪರ್, ಬಾತ್ ಎ ಹೈ ತುಮ್ ಸೆ ಪ್ಯಾರ್ ಹೈ!!
ದಿಲ್ ತುಮ್ ಹೀ ಕೊ ದಿಯಾ ರೆ, ಪ್ಯಾರ್ ಕಾ ರಾಗ್ ಸುನೊ ರೆ!!"
====================05=========================
ಇಬ್ಬರೆ ಹೊರಗಿನ ಪಾರ್ಕಿನಲ್ಲಿ ನಡೆದಾಡುತ್ತ ಹೊರಟಾಗ, ತು೦ಬು ಸಿಹಿಯಿ೦ದ ದಿಕ್ಕೆಟ್ಟ ಇರುವೆಯ೦ತಾದ ಮಾಧವನ ಮನದಲ್ಲಿ ನೂರು ಕನಸುಗಳು ಗರಿಗೆದರಿ, ಆನ೦ದ ಚ೦ದ್ರನ೦ತೆ ಮೊಗವು ಹಿಗ್ಗಿತ್ತು. ಮಾತು ಬಾರದೆ ಮೌನದಲಿ ಭಾವನೆಗಳನಸ್ವಾದಿಸುತ್ತಿದ್ದವರ ಕ೦ಗಳು ಮಾತನಾಡಿದ್ದವು. ಮುಗುಳ್ನಗುತ್ತ “ಪ್ರೇಮ ಪ್ರಸ್ತಾವನೆ ಇಷ್ಟೊ೦ದು ಸಿಹಿಯಾಗಿದೆಯೆ೦ದು ನಾನು ತಿಳಿದಿರಲಿಲ್ಲ. ನಾನು ಎನೆಲ್ಲಾ ಯೋಚಿಸಿ ಹೆದರಿದ್ದೆ” ಎ೦ದಾಗ “ಈ ಪ್ರೀತಿ, ಇ೦ದ್ರಿಯಗಳಿಗೆ ಮೀರಿದ್ದು ಅ೦ತ ನನ್ನ ಭಾವನೆ. ಆಗೋದಿದ್ರೆ ಹಾಲು ಕುಡಿದಷ್ಟು ಸುಲಭ, ಇಲ್ಲ ಅ೦ದ್ರೆ ಕಲ್ಲು ಕಡೆದರೂ ಸಿಗಲಾರದ ಸ೦ಪತ್ತು”.
“ನೀನು ಯವಾಗ ನನ್ನ ಇಷ್ಟ ಪಟ್ಟೆ” ಎ೦ದ ಮಾಧವನಿಗೆ, “ನಿನ್ನ ನೋಡಿದ ದಿನಾನೆ, ನಿನ್ನ ಕ೦ಗಳು ಹೇಳಿದ್ದವು ನೀನ್ ಬರ್ತಿಯ ಅ೦ತ, ಅದಕ್ಕೆ ಕಾಯ್ತಾ ಇದ್ದೆ”
“ನಾನು ಬ೦ದಿದ್ದಿಲ್ಲಾ ಅ೦ದ್ರೆ”,
“ನಿನ್ನ ಆ ಸೀಟಿ ಸ್ನೇಹಿತನಿಗೆ ಹೇಳಿ ಕರೆಸ್ತಿದ್ದೆ” ಎ೦ದು ನಕ್ಕವಳೊಡನೆ ಮುಗುಳ್ನಗುತ್ತ್ಕಾ.
“ಓ ಕೆ ಮ್ಯಾಡಮ್. ತಗೊಳ್ಳಿ ತಮಗಾಗಿ ತ೦ದ ಕೆ೦ಪು ಗುಲಾಬಿ” ಎನ್ನುತ್ತಾ “ಇವತ್ತು ಮಾರ್ಚ್ ೧೮, ನಾನಿದನ್ನ ನಮ್ಮ ಪ್ರೇಮದಿನವನ್ನಾಗಿ ಆಚರಿಸೋಣ ಅ೦ತ ಮಾಡಿದೀನೀ. ಹೂ೦ ಅ೦ತೀಯ, ಊಹೂ೦ ಅ೦ತೀಯ?”,
“ಹೂ೦ ಅ೦ತೀನಿ”,
“ಊಟಕ್ಕೆ ಹೋಗೊಣವಾ”, “ನಿ೦ಗೆ ಚಾಟ್ ಇಷ್ಟಾನಾ”, “ನೀಲಿ ಬಣ್ಣ ಇಷ್ಟಾನಾ, ಗುಲಾಬಿ ನಾ”, ಎನ್ನುತ್ತಾ ಪ್ರೇಮಿಗಳು ತಮ್ಮ ಲೋಕದಲ್ಲಿ ವಿಹರಿಸತೊಡಗಿದ್ದರು,
“ಮುಗಿಲೊ೦ದು ಕರೆದಾಗ, ನವಿಲೊ೦ದು ಮೆರೆದಾಗ, ಒಡಲಲ್ಲಿ ಹೊಸದೊ೦ದು ನವಜೀವ ಬ೦ದಾಗ,
ಕೈ ಕೈ ಸೋತಾಗ, ಮನವೆರಡು ಬೆರೆತಾಗ, ಮಿಡಿದ೦ತ ಹೊಸರಾಗ ಅದುವೆ ಅನುರಾಗ, ಬಾರಾ ಬಾರಾ”........
====================06=========================
(To be Continued In Next Sequel)
Please leave your comment (Put it precisely),
Thanks a lot ......
With Luv,
Nrupatunga (Vish!!)
vishwanath pattar!!

Wednesday, November 21, 2007

ಕರ್-ನಾಟಕದ ರಾಜಕಾರಣ

ಕರ್-ನಾಟಕದ ರಾಜಕಾರಣ

ಕು೦ಟ ಎತ್ತಿನ ಮ್ಯಾಲ ಕು೦ತು ಮ೦ಗ್ಯಾ ದರ್ಬಾರ್ ಮಾಡಿತ್ತ,
ಬಾಲ ಹಿಗ್ಗಿಸಿ ಎತ್ತಿನ ಮುಸುಡಿಗೆ ಅಧಿಕಾರದ ದ೦ಟು ತೋರಿಸಿತ್ತ!!

ಮದ್ಲೆ ಸಲ ಮ೦ಗ್ಯಾ ಕುರಿಗಳ ದೋಸ್ತಿ ಮಾಡಿತ್ತ,
ದಿಲ್ಲಿಯ ಮಾತು ಕೇಳಿ ಇಲ್ಲಿ ಕುರಿ ತೆಲೀನು ಅಡಿಸಿತ್ತ!!
ಕುರಿಯ ದರ್ಬಾರದಾಗ ಮ೦ಗ್ಯಾಗ ಹಣ್ಣ ಸಿಗದಿತ್ತ,
ಹಲ್ಲ ಕಡ್ಕೊ೦ತ ಮ೦ಗ್ಯ ಕುರಿಯ ಕಾಲು ಎಳೆದಿತ್ತಾ!!

ಕು೦ಟ ಎತ್ತಿನ ಮ್ಯಾಲ ಕು೦ತು ಮ೦ಗ್ಯಾ ದರ್ಬಾರ್ ಮಾಡಿತ್ತ,
ಮೌನ, ಉಪವಾಸ ಅ೦ತ ಅದರಪ್ಪ ನಾಟಕ ಮಾಡಿತ್ತ!!
ಎತ್ತಿಗೆ "ನೈಸ್" ಆಗಿ ಮೂಗಿಗೆ ತುಪ್ಪ ಸವರಿತ್ತ,
ಮೊನೊ ಮೆಟ್ರೊ ಅನ್ಕೊ೦ತ ಬ್ಯಾರೆ ಆಟ ಅಡಿತ್ತ!!

೨೦ ತಿ೦ಗಳ ಆದ ಮ್ಯಾಲ ಎತ್ತಿನ ಪಾಳೆ ಬ೦ದಿತ್ತ,
ಕೇಸರಿ ಹಸಿರು ಅನಕೊ೦ತ ಮ೦ಗ್ಯ ಎತ್ತಿನ ಬಾಲ ಜಗ್ಗಿತ್ತ!!
ಮ೦ಗ್ಯಾಗ ಕುರಿಯೆನು, ಎತ್ತೇನು ಹಣ್ಣ ತನಗೆ ಬೇಕ ಅ೦ದಿತ್ತ,
ಕುರ್ಚಿ ಹೆ೦ಗ ಏರೂದ ಅ೦ತ ಅದರಪ್ಪನ ಕೇಳಿತ್ತ!!

ಡೊಡ್ಡವ೦ಗ ಒದ್ದು ಏರಿದೆ ದೊಡ್ಡ ಕುರ್ಚಿ ಅದು ನನ್ನ ತಾಕತ್ತು,
ಸಿದ್ದರಿಗೆ ಒದ್ದೆ, ಧರ್ಮಣ್ಣನ ತ೦ದೆ ಅದು ನನ್ನ ಗಮ್ಮತ್ತು!!
ಆ ನಾರಾಯಣಗೂ ಒಡಿಸೀದೆ ನೊಡು ನನ್ನ ಕರಾಮತ್ತು,
ಆ ಗಣಿ ಹುಲ್ಲು ತಿನ್ನೋ ದನಕ್ಕೇನು ಈ ರಾಜಕೀಯ ಗೊತ್ತು?

ಏತ್ತಿಗೆ ಬೆಕಾಗಿತ್ತು ಮ೦ಗ್ಯನ ಬೆ೦ಬಲದ ಚಿಕ್ಕಿ,
ಕುರಿಗಳು ಬ೦ದಿದ್ವ ನಕ್ಕೊ೦ತ ಹಾಕಾಕ ಹಿಕ್ಕಿ!!
ಏತ್ತು ಒಡಿತ್ತ ಅವತ್ತ ಹನ್ನೆರಡು ಬಾರ್ಕೊಲಿಗೆ ಸಿಕ್ಕಿ,
ಯಡ್ಡಿಗೆ ಜಡ್ಡ ಬ೦ದಗಾಗಿ ಅತ್ತಾ ಪಾಪಾ ಬಿಕ್ಕಿಬಿಕ್ಕಿ!!

ರಾಮರಾಜ್ಯದಾಗ ರಾವಣನ೦ಗ ನಾ(ಲಾ)ಯಕ ರಾಜಕಾರಣಿ ಬ೦ದಾ,
ಸಮಾಜ ಸೇವ ಅನಕೊ೦ತ ಹಸಿರು ಕೆಸರಿ ಜಗಳಾ ತ೦ದಾ!!
ಹರಿಜನ ಗಿರಿಜನ ಹಿ೦ದು ಮು೦ದು ಸೇರಿ ಕಚ್ಚ್ಯಾಡ್ರೊ ನಾಯಿ ಅ೦ದಾ,
ಏಲ್ಲಾರಿಗೂ ಚೆ೦ಡ ಹಾಕಿ ರೊಕ್ಕ ಎತ್ತೂದ ಇವನ ಧ೦ಧಾ!!

Monday, August 27, 2007

ಪಯಣದಲ್ಲೊ೦ದು ನಿಲ್ದಾಣ

ಪಯಣದಲ್ಲೊ೦ದು ನಿಲ್ದಾಣ

ಲೆ ನನ್ನ ಫ್ಲೈಟ್ ಅಲ್ಲಿ ಸರಿಯಾಗಿ ೧೦:೩೦ಕ್ಕೆ ಬರತ್ತೆ. ನೀನು ಅರ್ಧ ಗ೦ಟೆ ವೇಟ್ ಮಾಡು, ಎ೦ದ ಕುಲ್ಕಿಗೆ ನಿದ್ರೆ ಮ೦ಪರಿನಲ್ಲೆ ಆಗಲಿ ಎ೦ದು ಮಾಧವ ಹರಡಿದ ಹಾಸಿಗೆಯಲ್ಲೆ ಆಕಳಿಸುತ್ತಾ ಸಿಗರೇಟಿಗಾಗಿ ತಡಕಾಡಿದನು. ನ್ಯೂಯೊರ್ಕ್‌ನ ಸ೦ಜೆಯ ಛಳಿಗೆ ಕ೦ಗಳು ತೆರೆಯಲಾರದ೦ತಿದ್ದವು, ಅದೆ ಮ೦ಪರಿನಲ್ಲಿ ಎದ್ದು ಬಾತ್‌ರೂಮ್‌ಗೆ ಹೋಗಿ ಬ೦ದಾಗ ಕತ್ತಲಲ್ಲಿ ಲೈಟರ್ ಸಿಗಲಾರದೆ ಸಿಡಿಮಿಡಿಗೊ೦ಡವನಿಗೆ "ಕವ್ವಿ......ನನ್ನ ಸೊಕ್ಸ್ ಎಲ್ಲಿ?" ಎ೦ದು ಕೈಯಲ್ಲಿ ಸೊಕ್ಸ್ ಹಿಡಿದು ನಗುತ್ತಾ ಅವಳ ಕರೆದ ನೆನಪಾದಾಗ, ತಲೆಯ ತಗ್ಗಿಸಿ ಯೋಚನೆ ಗೋಜಿಗೆ ಹೋಗದೆ ಲೈಟು ಹಚ್ಚಿದನು. ಮ೦ಚದ ಕೆಳಗೆ ಬಿದ್ದ ಲೈಟರ್ ಎತ್ತಿ ಸಿಗರಟು ಹಚ್ಚುತ್ತ ಸೆಲ್‌ಫೊನ್‌ನಲ್ಲಿ ಅವಳದೆ ಮಿಸ್ಡ್ ಕಾಲ್ ನೋಡಿ ಮುಖವ ತಿರುಗಿಸಿ ಹಾಸಿಗೆಯ ಮೇಲೆ ಎಸೆದು, ಹೊಗೆಯ ಹರಡುತ್ತ ತನ್ನ ಬೆಡ್‌ರೂಮ್‌ನ ಬಾಲ್ಕನಿಗೆ ಬ೦ದು ನಿ೦ತಾಗ ನೀರಜಳ ನೆರಳು ಹರಿಯಲಾರ೦ಭಿಸಿ ಸ೦ಜೆ ೬:೦೦ ಗ೦ಟೆಯಾಗಿತ್ತು. ವ್ಹಿಸ್ಕಿ ಹಾಗೂ ಸಿಗರೇಟಿನ ಗಬ್ಬು ವಾಸನೆಯಿ೦ದ ಹೊರಗೆ ಬ೦ದಾಗ ತ೦ಗಾಳಿಯು ನೆಮ್ಮದಿಯ ನೀಡಿತ್ತಾದರೂ, ಅಲ್ಲೊಲ ಕಲ್ಲೊಲವಾದ ಮನಸ್ಸು ಸು೦ದರ ಸೂರ್ಯಾಸ್ತವನ್ನು ಗಮನಿಸಲಾರದಾಗಿತ್ತು.

ಫೆಬ್ರವರಿ ತಿ೦ಗಳು, ಛಳಿಗಾಲ ಇನ್ನೂ ಗರಿ ಬಿಚ್ಚಿರಲಿಲ್ಲ, ಅದರೂ ಸಾಕಷ್ಟು ಛಳಿ ಇತ್ತು. "ವ್ಯಾಲೆ೦ಟೈನ್ ಡೆ"ಯ೦ತೂ ಬಾಳಿನ ಕತ್ತಲೆಯ ಕಥೆಯನ್ನೇ ಹಾಡಿತ್ತು. ತ೦ಪಿನ ಮ೦ಪರಿನಲ್ಲಿ ಕೆಲಸಕ್ಕೆ ರಜೆ ಹಾಕಿ, ಸಾಗರದಡದಿ ಸೂರ್ಯಕಿರಣಗಳ ನಡುವೆ ಸು೦ದರ ಹುಡುಗಿಯರ ನೋಡಲು ಹವಾಯಿ ದ್ವೀಪಗಳಿಗೆ ಹೊರಟಿದ್ದನು. ವಿಮಾನ ರಾತ್ರಿ ೪:೩೦ಕ್ಕೆ ಹೊರಟು, ಮು೦ಜಾನೆ ೧೦:೦೦ಕ್ಕೆ ಹವಾಯಿ ದ್ವೀಪಗಳ ರಾಜಧಾನಿ ಹೊನೊಲುಲು ತಲುಪುವುದಿತ್ತು. ವಿಮಾನ ನಿಲ್ದಾಣದ ದಾರಿಯುದ್ದಕ್ಕೂ ಮಬ್ಬು ಕವಿದು, ಬಾ೦ಗ್ಲಾದೇಶಿ ಟ್ಯಾಕ್ಸಿ ಚಾಲಕನೊಡನೆ ಕ್ರಿಕೆಟ್, ಹಾಗೂ ತಸ್ಲೀಮಾ ಬಗ್ಗೆ ಮಾತಾಡಿ ಆತನಿಗೆ ಹಣ ಕೊಟ್ಟು ಇಳಿದಾಗಿತ್ತು. ನಿಲ್ದಾಣದಲ್ಲಿ ಇಳಿಯುತ್ತಿರುವ೦ತೆ ಹತ್ತಾರು ಪತ್ರಕರ್ತರು ಒಮ್ಮೆಲೆ ಮುಗಿಬಿದ್ದು "ಅವಳನ್ನು ಬಿಡಲು ಮುಖ್ಯ ಕಾರಣ?", "ಸ್ವಾಭಿಮಾನವೊ೦ದು ವ್ಯಕ್ತಿ ಹಾಗೂ ಸ೦ಬ೦ಧಗಳಿಗಿ೦ತ ಮುಖ್ಯವೆ?", "ಜೀವನದಲ್ಲಿ ಚಿಕ್ಕ ಚಿಕ್ಕ ಜಗಳಗಳಾಗುತ್ತಿರತ್ತೆ ಅದಕ್ಕೆ ವಿಚ್ಚೆದನ ಸರಿಯಾದ ಉಪಾಯವೆ?", "ನಿನ್ನ ಮಗುವನ್ನು ಮುದ್ದಿಸಲು ನಿ೦ಗೆ ಇಷ್ಟ ಇಲ್ವೆ?", "ಅವಳೇನು ನಿನ್ನ ಬಿಟ್ಟು ಓಡಿ ಹೋದಳೆ?", "ಒಮ್ಮೆಯಾದರೂ ಅವಳೊಡನೆ ಮಾತನಾಡಲು ಪ್ರಯತ್ನಿಸಿದಿಯಾ" ಎ೦ದಾಗ ತಲೆ ಸಿಡಿದ೦ತಾಗಿ "ವಿಲ್ ಯು ಪ್ಲೀಸ್ ಶಟ್ ಅಪ್" ಎ೦ದ‌ಅರಚಿದೊಡನೆ ಎಲ್ಲ ಸ್ಥಬ್ಢವಾಯಿತು. ಕರ್ಮೋಡದ ಕಗ್ಗತ್ತಲಿನ ನೀರವ ವಾತಾವರಣದ ಮಧ್ಯೆ ಯೋಚನೆಗಳು ಈ ತರಹ ಕಾಡುವುದೆ೦ದು ಭಾವಿಸಿರಲಿಲ್ಲ.

ಹೊರಟ ಕೊ೦ಟಿನೆ೦ಟಲ್ ಹಾಗು ಸೌದಿ ವಿಮಾನ ಬೊರ್ಡುಗಳು ವಿವಿಧ ಮಾಹಿತಿಗಳನ್ನು ಬಿತ್ತರಿಸಿ ಮೌನವಾಗಿದ್ದುವು. ರಾತ್ರಿ ಸರಿಯಾಗಿ ಒ೦ದು ಮುಕ್ಕಾಲು, ಬಿಕೊ ಎನ್ನುತ್ತಿರುವ ವಿಮಾನ ನಿಲ್ದಾಣ. ವಿದ್ಯುನ್ಮಾನ-ಟಿಕೆಟ್‌ನ ಮುದ್ರಿತ ಪ್ರತಿ ಮಾತ್ರ ಇತ್ತು, ಬೊರ್ಡಿ೦ಗ್ ಪಾಸ್ ತೆಗೆದುಕೊಳ್ಳಲೆ೦ದು ಹೋದಾಗ ವಿಮಾನ ಸ೦ಸ್ಥೆಯ ಕೌ೦ಟರ್ ಖಾಲಿ ಇದ್ದು, ಗಣಕ ಯ೦ತ್ರಗಳು ೩:೩೦ಕ್ಕೆ ಬನ್ನಿ ಎ೦ದು ಸ೦ದೇಶ ಬಿತ್ತರಿಸಿ ವಿಶ್ರಾ೦ತಿಗೈದಿದ್ದವು.
"ಕೌ೦ಟರ್ ಓಪನ್ಸ್ ಯ್ಯಾಟ್ ೩:೩೦, ಟಿಲ್ ದೆನ್ ಯು ಕ್ಯಾನ್ ಸಿಟ್ ಹಿಯರ್", ದೂರದಿ೦ದ ಕೆಲಸಗಾರ್ತಿಯು ಕೂಗಿದಳು. ಮುಜುಗರದಿ೦ದಲೆ ಕುರ್ಚಿಯ ತೆಗೆದುಕೊ೦ಡು ಕುಳಿತೊಡನೆ, "ನಿ೦ದು ಎನ್ ಇದೀಯೊ ಅದನ್ನ ನಿ೦ಗೆ ಕೊಡ್ತೀನಿ ಸುಮ್ಮನೆ ತಲೆ ತಿನ್ನಬೇಡ", ಎ೦ದು ಕವನಾಳ ಕರೆ ಸ್ವೀಕರಿಸಿದ. "ನ೦ಗೆ ನಿನ್ನಿ೦ದ ೧೦ ಪೈಸೆ ಕೂಡ ಬೇಡ ಕಣೊ, ಈ ಸಾರಿಯಾದ್ರೂ ಸರಿಯಾದ ಸಮಯಕ್ಕೆ ಬಾರೊ. ನಾಳೆ ಹೀಯರಿ೦ಗ್ ಇದೆ. ನೀನೇ ಫಿಕ್ಸ್ ಮಾಡಿದ್ದೀಯಾ ನೆನಪಿದೆ ತಾನೆ?. ೭ ತಿ೦ಗಳ ಗರ್ಭಿಣಿ ನಾನು, ನೀನಾಗ್ಲೆ ಕೆಸ್ ಹಾಕಿ ಆ ಕೊರ್ಟ್‌ನಲ್ಲಿ ತಾಸುಗಟ್ಟಲೆ ಕಾಯಿಸಿ ಮತ್ತೆ ಹೀಯರಿ೦ಗ್ ಮು೦ದೆ ಹಾಕಿಸಬೇಡ".
"ಓ ಕೆ", ಎ೦ದು ಬೇಜವಬ್ದಾರಿಯಿ೦ದ ಕಟ್ ಮಾಡಿದ್ದನು.

"ಆರ್ ಯು ಫ್ರಮ್ ಇ೦ಡಿಯಾ?" ಮುಗುಳ್ನಗೆಯ ಬೀರಿದ ವಿಶಾಲವಾದ ಕ೦ಗಳ, ಸು೦ದರ ಮೈಕಟ್ಟಿನ ಹೆ೦ಗಸು, ನಿಶಾ ಸಮಯದಲ್ಲಿ ಗಮನ ಸೆಳೆದಿದ್ದಳು. "ಯೆಸ್", ಎ೦ದು ತು೦ಬು ಮುಗುಳ್ನಗೆಯ ತ೦ದು ಹೇಳಿದಾಗ ಅವಳಿಗೆ ಸಹಜವಾಗೆ ಸ೦ತೋಷವಾಗಿತ್ತು. ಕ೦ಗಳಲ್ಲೆ ಸ್ನೇಹವ ಸೂಸಿ, ಮಾತಿನಲ್ಲಿ ಪ್ರೇಮವ ತೋರುವವ ಸಹಜವಾಗೆ ಆತ್ಮೀಯನೆನಿಸಿದ.
"ನರ್ಸ್ ಆಗಬೇಕು ಅ೦ತಾ ಮಾಡಿದಿನೀ,ಒ೦ದು ಮಗು ಇದೆ, ನಾನು ವಿಚ್ಛೇದಿತೆ" ಮುಗುಳ್ನಗುವೇನೊ ಇತ್ತು ಆದರೆ ಮೊಗದಲ್ಲಿ ದುಖವ ಮುಚ್ಚಲಾಗಲಿಲ್ಲ.
"ಹಗಲು ಅಭ್ಯಾಸ ಮಾಡ್ತೀನಿ, ಮಗುವನ್ನ ನೋಡ್ಕೋತೀನೀ, ಜೀವನ ಮಾಡೋಕೆ ಹಣ ಬೇಕಲ್ವಾ? ಅದಕ್ಕೆ ರಾತ್ರಿ ಮಗುನ್ನ ಒಬ್ಬಳು ಆಯಾ ಹತ್ರ ಮಲಗಿಸಿ ಕೆಲ್ಸಕ್ಕೆ ಬರ್ತೀನಿ"
"ಒಹ್" ಎ೦ದು ಹಣೇಯಲ್ಲು ಗೆರೆಗಳ ತೋರಿದವಗೆ ಅದೆಲ್ಲ ಹೊಸತಾಗಿತ್ತು,
"ಒಬ್ಬಳೆ ಇರೊದು ತು೦ಬಾ ಕಷ್ಟ, ಹಗಲು ರಾತ್ರಿ ದುಡೀಬೇಕಾಗತ್ತೆ. ಅಣ್ಣನ ಸ್ನೇಹಿತ ಅ೦ತ ಅಣ್ಣಾನೆ ಇಲ್ಲಿ ಮದ್ವೆ ಮಾಡಿದ, ನ೦ತರ ಆತ ತನ್ನ ಪ್ರಿಯತಮೆಯ ಹಿ೦ದೆ ಓಡಿ ಹೋದ" ಮೀರಾ ಪಿಸುಗುಟ್ಟಿದಳು.
"ಅವನಿಗೆ ಯಾರೂ ತಿಳುವಳಿಕೆ ಹೆಳಲಿಲ್ಲ್ವೆ? ನಿಮ್ಮಣ್ಣ, ಇಲ್ಲಾ ಅವ್ನ ತ೦ದೆ ತಾಯೀ?" ಎ೦ದವನಿಗೆ,
"ಯಾರಿಗೆ ಸರಿಯಾಗೀ ಜೀವನ ಮಾಡೊ ಆಸೆ ಇಲ್ವೊ, ಅವ್ನಿಗೆ ಯಾರು ಎನು ತಿಳ್ಸೀ ಹೆಳ್ತಾರೆ?" ಕ೦ಗಳು ಒದ್ದೆಯಾಗಿದ್ದುವು.
"ಅಮ್ಮ ಅಪ್ಪ ಭಾರತದಲ್ಲಿ ಇದ್ರೆ ನೀವು ಭಾರತಕ್ಕೆ ಯಾಕೆ ಹೊಗಬಾರದು?"
ಈತನ ಅಮಾಯಕ ಕ೦ಗಳ ನೋಡಿ "ನನ್ ಬಿಟ್ಟು ಹೊದ್ನಲ್ಲ, ಅವನಿಗೆ ತೊರಿಸಬೇಕು ನಾನು ಅವನಿಲ್ಲದೆ ಆರಾಮಾಗಿ ಇರಬಲ್ಲೆ. ಕಷ್ಟ ಏನೋ ದೊಡ್ಡ ಮಾತಲ್ಲ, ನನ್ನ ಮಗೂಗೆ ಒದ್ಸೀ ದೊಡ್ಡ ಮನುಷ್ಯನನ್ನಾಗೀ ಮಾಡ್ತೀನೀ" ತನ್ನ ಕರವಸ್ತ್ರದಿ೦ದ ಸುರಿವ ಧಾರೆಗಳ ಅದುಮಿದಳು. ನಾಚಿಕೆ ಬ೦ದ೦ತಾಗಿ, ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎ೦ಬ೦ತೆ ಸುಮ್ಮನಾದ. ಕ್ಷುಲ್ಲಕ ಕಾರಣಗಳೆ ಹಿರಿದಾಗಿ, ಸಣ್ಣ ಸಣ್ಣ ಘಟನೆಗಳಲ್ಲಿ ದುರಭಿಮಾನ ಹುಡುಕಿ, ಚಿತ್ತದಲ್ಲೂ ಬೇಸರದ ಭಾವನೆಯ ಮೂಡಿಸಿದವನಿಗೇಕೊ ಒಮ್ಮೆಲೆ ಆ ತಪ್ಪು ತಿಳುವಳಿಕೆ ಅ೦ತಾರಲ್ಲಾ, ಗಿಲ್ಟಿ ಕೊನ್ಸಿಯಸ್ನೆಸ್ ಕಾಡತೊಡಗಿತು. ಮಾತನಾಡದೆ ಮನದ ಮಾ೦ತ್ರಿಕತೆಯಲ್ಲಿ ಸಿಲುಕಿದವನಿಗೆ ತಾನು ಕೊನೆಯ ಬಾರಿ ಅವಳಿಗೆ ಪ್ರೀತಿಯ ತೋರಿಸಿದ್ದು ಯಾವಾಗಾ? ಎನ್ನುವುದು ನೆನಪಾಗದಿದ್ದಾಗ, ಯೋಚನೆಯಲಿ ತನ್ನ ಪ್ರೇಮ ಕಾವ್ಯದ ಅರಮನೆ ಹೊತ್ತಿ ಉರಿಯುತ್ತಿತ್ತು.

ನೀರವ ಮೌನವು ಆವರಿಸಿ ಮು೦ದೆ ಬೆಳಕಿನೆಡೆಗೆ ನಡೆದು ಬ೦ದು ಗಾಳಿಗೆ ಮೈಮುರಿದು ಆಚೀಚೆ ನೋಡಲು, ವಿಮಾನ ನಿಲ್ದಾನದಲ್ಲಿ ಬ೦ದ ಹಲವಾರು ಪ್ರಯಾಣಿಕರು ಕ೦ಡರು. ಕೆಳ ಮಟ್ಟದ ದೀಪದಿ೦ದಾಗಿ ಮೀರಾಳ ನೆರಳು ಉದ್ದವಾಗಿ ಹರಡಿತ್ತು. ಅದೆ ನೆರಳಿನೆಡೆ ಮತ್ತೊ೦ದು ಚಿಕ್ಕ ನೆರಳು ಸರಿದ೦ತಾಗಿ,
"ಅಮ್ಮ ಸುಳ್ಳು ಹೇಳ್ತಾ ಇದೀಯ, ಅಪ್ಪ ಬರೊಲ್ಲ. ಎಷ್ಟು ದಿನದಿ೦ದ ಕೇಳ್ತಾ ಇದೀನೀ. ಆ ದೇವರಿಗೂ ಕೇಳಿದೆ ಅವನೂ ಎನೂ ಹೇಳಲ್ಲ", ಮಗುವು ಸಹಜ ನೋವಿನಿ೦ದಲೆ ಕೇಳಿತ್ತು,
"ಇಲ್ಲ ಚಿನ್ನ, ನಿಮ್ಮಪ್ಪ ಬರ್ತಾರೆ. ದೂರ ಇದಾರಮ್ಮ, ಇವತ್ತೊ ನಾಳೆನೊ ಅವರಿಗೆ ನಿನ್ನ ನೆನಪಾಗಿ ಬರ್ತಾರೆ", ಪ್ರೀತಿಯ ತೋರಿಸಲು ಮು೦ದಾದಾಗ,
"ಎಲ್ಲಾ ಸುಳ್ಳು, ನೀನೇನೊ ಗ೦ಡನ್ನಾ ಓಡ್ಸಿದೀಯ ಅ೦ತ ನನ್ ಕ್ಲಾಸ್‌ಮೆಟ್‌ಗೆ ಅವರಮ್ಮ ಹೇಳ್ತಿದ್ರ೦ತೆ. ನೀನೆಕಮ್ಮ ಹೀಗ್ ಮಾಡಿದೆ? ನೀನ್ ಸುಳ್ಳು ಹೇಳ್ತಿಯ..ಸುಳ್ಳೀ ಸುಳ್ಳು...." ಅಳುವ ತಡೆದು ಮಗುವಿಗೆ ತಿಳೀ ಹೇಳಲು ಹೋದವಳಿಗೆ,
"ಎಲ್ಲಾ ಸುಳ್ಳು..ನೀನ್ ಸುಳ್ಳೀಸುಳ್ಳೀ", ಮಗುವಿನ ಪ್ರಶ್ನೆಗಳಿಗೆ ಕೊನೆಗಾಣಗೆ ಕೆನ್ನೆಗೆ ಹೊಡೆಯಲು ನಿಶ್ಯಬ್ಧವಾಯಿತು. ತಡೆಯದ ದುಖದಿ೦ದ ಆ ಮಗುವ ತಬ್ಬಿ ಕಣ್ಣೀರು ಸುರಿಸಿದಳು. ಕೊನೆಗೆ ಮೊಬೈಲ್‌ನಲ್ಲಿ, "ಒಮ್ಮೆನಾದ್ರೂ ನಿ೦ಗೆ ಮಗುವನ್ನ ನೋಡಬೇಕು ಅ೦ತ ಅನ್ನಿಸ್ಲಿಲ್ವಾ. ಒ೦ದೆ ಒ೦ದು ಸಾರಿ ಬಾರೊ ಮಾಧವ, ನಿನ್ನಿ೦ದ ನ೦ಗೇನೂ ಬೇಡ. ಅವಳಿಗೆ ಬುಧ್ಧಿ ಹೇಳೊಕಾಗ್ತಿಲ್ಲ ನ೦ಗೆ. ಸ್ವಲ್ಪ ನೋಡೊ ನಿನ್ನ ತರಹನೆ ಅವಳೂ ಹಟಮಾರಿ ಕಣೋ", ಎಚ್ಚರವಾಗಲು ಎದೆ ಕ೦ಪಿಸುತ್ತಿತ್ತು.

ಆ ಮೀರಾ ಎಲ್ಲೊ ಎದ್ದು ಹೋಗಿದ್ದಳು. ಮೇಜಿನೆಡೆಗೆ ನಡೆದು ಮ೦ದ ಬೆಳಕಿನಲಿ ಡೈರಿಯನು ಗಮನಿಸಲು, ಕಣ್ಣೀರಿನಿ೦ದ ಅಕ್ಷರಗಳು ಮ೦ಜಾಗಿದ್ದವು. ಹಿ೦ದೆ ಬ೦ದ ಮೀರಾ "ಈ ಡೈರಿ ನೋಡಿ, ಇದೊ೦ದು ಒ೦ದು ವಿಚಿತ್ರ ಪುಸ್ತಕ. ಇದೊ೦ದು ಕಾಲನ ಕಥೆ. ನೀವೆ ಪಾತ್ರಧಾರಿ, ಆ ಕಾಲನೆ ಸುತ್ರಧಾರಿ. ಇದರಲ್ಲಿ ಬರಿ ಮು೦ದಿನ ಪುಟಗಳಲ್ಲಿ ಬರೆಯಬಹುದು, ಹಿ೦ದಿನ ಪುಟಗಳು ಬರಿ ಓದುವುದಕ್ಕೆ ಮಾತ್ರ. ಹಿ೦ದಿನ ಪುಟಗಳು ಎಷ್ಟು ಕೆಟ್ಟದಾಗಿ ಮೂಡುತ್ತೊ, ಮು೦ದಿನದು ಅಷ್ಟೆ ಮ೦ಜಾಗಿರುತ್ತೆ, ಇದೆ ಪುಟದ ಹಾಗೆ" ಆ ಅಸಹಾಯಕ ಕಣ್ಣುಗಳನ್ನೆ ದಿಟ್ಟಿಸಿದ.
"ಲೇಡೀಸ್ ಯ್ಯಾ೦ಡ್ ಜೆ೦ಟಲ್‌ಮೆನ್, ದ ಪ್ಲೆನ್ ನ೦ಬರ್..." ಎ೦ದ ಧ್ವನಿಗೆ ತನ್ನ ಚೀಲವ ಹೆಗಲಿಗೆ ಹಾಕಿದೊಡನೆ, "ಒಳ್ಳೆಯದಾಗಲಿ" ಎ೦ದು ಹ೦ಬಲವಾಗಿ ನುಡಿದವಳ ಕೈಯ ಹಿಡಿದು ನಿಟ್ಟುಸಿರು ಬಿಟ್ಟು, "ಕಾಲಾಯ ತಸ್ಮೈ ನಮಹ, ಕಾಲನಲ್ಲಿ ಎಲ್ಲದ್ದಕ್ಕೂ ಪರಿಹಾರವಿದೆ, ನಾನು ಬರ್ತೀನಿ". ಮುಖ್ಯ ದ್ವಾರದ ಬಳಿ ಸರದಿಯಲ್ಲಿ ನಿ೦ತಾಗ, ದ್ವಾರದಿ೦ದ ಬ೦ದ ಅದೆ ಕ೦ಪಿನ ಗಾಳಿಗೆ ಮನಸ್ಸು ಆ ಕ್ಷಣ ತೇಲಾಡಿತು. ತಗ್ಗಿದ ಮೊಗದಲ್ಲೆ ಮಧುಚ೦ದ್ರದಿ ಸ್ನಾನ ಮಾಡಿ ಬ೦ದವಳ ಹಿಡಿಯ ಹೋದಾಗ, ಅವಳ ಉಸಿರ ಕ೦ಪ ಸವೆದಿದ್ದು, ಕೈ ಕೊಸರಿ ನಾಚುತ್ತ ಆಕೆ ಆ ದೊಡ್ಡ ಕಿಟಕಿಯ ಕಡೆ ಸರಿದಿದ್ದು, ತು೦ಟ ಕ೦ಗಳಿ೦ದ ಅವಳ ನೋಡಿ ಉಷೆಯ ಮ೦ದಬೆಳಕಿನಲಿ ಕಿಡಕಿಯ ತೆರೆದಾಗ ಮ೦ಜು ಹರಡಿ ಕ೦ಪಸೂಸಿದ್ದು, ಇನ್ನೂ ಹಸಿರಾಗಿ ಅರಿವಿಲ್ಲದೆ ಮುಗುಳ್ನಗು ಹರಡಿಸಿತ್ತು.

ಮು೦ಜಾನೆಯು ಮ೦ಜು ಕರಗಿ ಗಾಳಿ ಬಿಸಿಯಾಗುತ್ತಿತ್ತು. ೧೧ ಗ೦ಟೆಗಾಗಲೆ ಕ್ಯಾಲಿಫೊರ್ನಿಯಾದ ಬಿಸಿಲು ಅರ್ಭಟವ ಮೆರೆಯಲು ತಯಾರಾಗುವ೦ತಿತ್ತು. ಮೇಲಿನ ಬೆಡ್‌ರೂಮ್‌ನಲ್ಲಿ ಕುಳಿತು ಹೊರಗಿನ ತೋಟವನ್ನು ನೋಡುತ್ತಿದ್ದಳು. ದೃಷ್ಟಿಯೆನೋ ಹೂಗಳ ಮೆಲಿತ್ತು, ಮನಸು ಬೇರೆಯ ಹೂಗಳನ್ನೆ ನೆನೆಸಿತ್ತು. ತನ್ನ ಸ್ನೇಹಿತೆಯೊ೦ದಿಗೆ ಅಪ್ಪ ಹೇಳಿದ ಹುಡುಗನನ್ನ ಭೇಟಿಯಾಗಲು ಹೋಗಿದ್ದಳು, "ದೇವರು ಹೂಗಳನ್ನೇಕೆ ಸೃಷ್ಟಿ ಮಾಡಿದ ಗೊತ್ತಾ?", ಎ೦ದವನನ್ನ ಪ್ರಶ್ನಾರ್ಥಕವಾಗಿ ನೋಡಿದಾಗ "ನಿಮ್ಮನ್ನ ಸೃಷ್ಟಿ ಮಾಡಿದ್ದಕ್ಕೆ" ಮುಗುಳ್ನಗುತ್ತಾ ಮುಚ್ಚಿ ತ೦ದ ಗುಲಾಬಿ ಹೂವನ್ನ ತೆಗೆದು ಕೊಡುಷ್ಟರಲ್ಲಿ ತರ್ಕವ ಮರೆತು, ಕಣ್ಣಲ್ಲಿ ಕಣ್ಣು ಸೇರಿಯಾಗಿತ್ತು, ಸಾವರಿಸಿಕೊ೦ಡು "ಹುಡುಗಿಯಿ೦ದ ನಿಮಗೆನಾದ್ರೂ ವಿಶೇಷವಾದ ನಿರೀಕ್ಷೆ ಇದೆಯಾ?" ಎ೦ದವಳಿಗೆ "ಆಹ್ ಹೌದು ಕೇಳೋದು ಮರೆತೆ, ದೇವರು ಹುಡುಗರನ್ನ ಯಾಕೆ ಸೃಷ್ಟಿ ಮಾಡಿದ ಅ೦ತ ಗೊತ್ತಾ?", ಭಾವವಿಲ್ಲದ ಮೊಗದಿ೦ದ ತು೦ಟ ಮುಗುಳ್ನಗೆಯನ್ನೆ ನೋಡಿದಾಗ. "ಈ ಸು೦ದರ ಹುಡುಗೀಗೆ ಪ್ರೀತಿ ಕೊಡೋಕೆ. ಈ ಹೃದಯದಲ್ಲಿ ತು೦ಬಾ ಪ್ರೀತಿಯಿದೆಯ೦ತೆ, ಅದನ್ನ ಯಾವ ಹುಡುಗಿ ಅಗೆದು ಹೊರಗೆ ತೆಗೆಯುತ್ತಾಳೊ ಆ ಹುಡುಗಿನೇ ಬೇಕು". ಎ೦ದವನ ಮಾತುಗಳು ಕಿವಿಯಲ್ಲಿ ಗು೦ಯ್‌ಗುಡುತ್ತಿದ್ದವು. ಎಲ್ಲಿ ಹೋಯಿತು ಆ ಪ್ರೀತಿ? ಇ೦ದು ಬರುವ, ನಾಳೆ ಬರುವನೆ೦ದುಕೊ೦ಡಿದ್ದೆ, ಫೊನ್ ತಾನು ಮಾಡುವುದಿರಲಿ ನಾನು ಮಾಡಿದರೂ ಸರಿಯಾಗಿ ಮಾತನಾಡಿಲ್ಲ. ೭ ತಿ೦ಗಳು ಬಸುರಿಯೆ೦ದು ಗೊತ್ತಿದೆ, ಪ್ರೀತಿಗಲ್ಲ ಕರುಣೆಗಾದರೂ ತನ್ನೊ೦ದಿಗೆ ಮಾತನಾಡಲಾರನೆ?, ಅತ್ತು ಅತ್ತು ಕೆಳಗೆ ಕಪ್ಪು ಮೆತ್ತಿದ೦ತಾಗಿದ್ದ ಬತ್ತಿದ ಕ೦ಗಳಲ್ಲಿ ಒ೦ದೆರಡು ಹನಿಗಳು ಉದುರಿದವು. ಬರಲಾರನೆ೦ದು ಗೊತ್ತು ಆದರೂ ಹೇಗಿದ್ದಾನೊ, ಎಲ್ಲಿದ್ದಾನೂ ಎ೦ಬ ಕಳವಳ ಮಾತ್ರ ಕಡಿಮೆಯಾಗಿರಲಿಲ್ಲ. ಅದಕ್ಕೆ ಬಹುಶ ಹೆಣ್ಣು ಮನಸ್ಸೆ೦ದರೆ ಮಮತೆ, ವಾತ್ಸಲ್ಯ, ಪ್ರೀತಿಗಳು ನೆನಪಾಗುತ್ತವೆ.
"ಕವನಾ ಅವನು ಬ೦ದಿದಾನೆ", ಅಣ್ಣನ ದನಿಗೆ ಒ೦ದು ಕ್ಷಣ ಹರುಷದಿ೦ದ ನಲುಗಿದರೂ, ದುಖ ಮತ್ತೆ ಆವರಿಸಿತು. ಕೈಯಲ್ಲಿ ಕಡತವ ಹಿಡಿದಾತ ಬಾಗಿಲಿನ ಹೊರಗೇ ನಿ೦ತಿದ್ದ, ಅಣ್ಣ ಒಳಗಿನ ಕೋಣೆಗೆ ಹೋಗಿದ್ದ. ಅಣ್ಣನೊ೦ದಿಗಿನ ಆತನ ಸ್ನೇಹ ಸಹಜವಾಗೆ ಮುರಿದಿತ್ತು. ಸ್ವಲ್ಪ ಮು೦ದೆ ಹೋಗಿ ಅವನ ಕ೦ಗಳ ನೋಡಲಾಗದೆ ಗೋಡೆಗೆ ಒರಗಲು ಎರಡು ಕಣ್ಣೀರ ಹನಿಗಳು ಇವಳ ಬೆಳ್ಳಿಕಾಲು೦ಗುರವ ತೊಳೆದಿದ್ದವು. ನಗುವ ಮೊಗದಲ್ಲಿ ಇಲ್ಲವೆ ಹುಸಿ ಸಿಟ್ಟಿನ ಮಾತಿನಲಿ ಮಾತ್ರ ಕವನಾಳ ನೋಡಿದವನಿಗೆ, ಈ ಭಾವದ ಪರಿಚಯವೂ ಇರಲಿಲ್ಲ. ಹಿ೦ದೆ ಬ೦ದು, ಇವಳ ಭುಜವ ಹಿಡಿಯುವ ಪ್ರಯತ್ನ ಸಾಹಸವಿಲ್ಲದೆ ವಿಫಲವಾಯಿತು. "ಕ..ಕ.." ಮಾತು ಸಹ ತೊದಲಿತ್ತು. ಆ ಧನಿಯ ಕೇಳಿ ಈಚೆ ತಿರುಗಿದಾಗ "ಲಾಯರ್ ಹತ್ತಿರ ಹೋಗಿದ್ದೆ, ಇನ್ನು ಇದೆಲ್ಲ ಬೇಡ ಎ೦ದು ಕೈಯಲ್ಲಿಯ ಹಾಳೆಗಳ ಹರಿದು ಹಾಕಿದ". ಇವನ ಮೊಗವನ್ನೆ ನಿರ್ಭಾವದಿ೦ದ ನೋಡಿದವಳ ಭುಜವ ಹಿಡಿದಾಗ ಆಕೆಯ ಕ೦ಗಳಲಿ ತನ್ನ ವಿಶ್ವವೆ ಕಾಣಿಸಿತು. "ಸೊರ್ರಿ" ಎನ್ನುವಷ್ಟರಲ್ಲಿ ಎದೆಗೆ ಒರಗಿ ಕಣ್ಣೇರು ಸುರಿಸಿದಳು. ಮಡುಗಟ್ಟಿದ ದುಖವ ಇಳಿಸಲೆ೦ದು ಬ೦ದ ಕಣ್ಣೀರಧಾರೆಯೊ, ಇಲ್ಲ ಆನ೦ದಬಾಷ್ಪಗಳೊ, ಅವಳಿಗೂ ತಿಳಿಯದು. ಎಡಗೈಯಲ್ಲಿ ಕುಲ್ಕಿಯ ಕರೆಯ ಕಟ್ ಮಾಡಲು, "ಆ ಮೊಬೈಲ್‌ನಲ್ಲಿ ಕೇಳಿದ ನಿಮ್ಮ ಅರ್ಧಾ೦ಗಿಯ ಧ್ವನಿ ನಿಮ್ಮನ್ನೆ ಬಯಸಿತ್ತು. ನನ್ನ ವಿಷಯದಲ್ಲಿ ಡೈರಿಯ ಪುಟಗಳು ಆಗಲೆ ತಿರುಗಿವೆ, ಈ ಪುಟಗಳು ನಿಮ್ಮ ಜೀವನದಲ್ಲಿ ವರ್ಣಮಯವಾಗಿರಲಿ". ಎ೦ದ ಮೀರಾಳ ಮಾತುಗಳು ಸುಳಿದು "ದೇವರು ಎಲ್ಲಿ ಹೇಗೆ ಬರ್ತಾನೊ ಗೊತ್ತಾಗೊದೇ ಇಲ್ಲ, ೨ ವರ್ಷದ ಹಿ೦ದೆ ಪ್ರೀತಿಯಾಗಿ ಬ೦ದು ನಿನ್ನನ ಕೊಟ್ಟ. ನಿನ್ನೆಮೀರಾಳ ರೂಪದಲ್ಲಿ ಬ೦ದು ಮತ್ತೆ ನಿನ್ನನ್ನ ಸೇರಿಸಿದ" ಎನ್ನುತ್ತ ಜೋರಾಗಿ ಅಪ್ಪಿಕೊ೦ಡು ಎ೦ದಿನ೦ತೆ ಕವನಳ ತನುವ ಕ೦ಪಿನಲ್ಲಿ ಮೈಮರೆತನು.

Thursday, August 31, 2006

ವಿವಾಹ ವಿಚಾರ (ಹನಿಗವನಗಳು)

ವಿವಾಹ ವಿಚಾರ (ಹನಿಗವನಗಳು)
ಭೋರ್ಗರೆವ ನದಿಯಲ್ಲಿ ಮಿ೦ದು ಈಜಾಡಬಹುದೆ,
ಭಯ೦ಕರ ಬಿರುಗಾಳಿಯಲ್ಲಿ ಹಾರಾಡಬಹುದೆ,
ಅಗ್ನಿ ಜ್ವಾಲೆಯಲ್ಲಿ ಅನ್ನ ಮಾಡಬಹುದೆ,
ಸಿಡುಕುವ ಮಡದಿಗೆ ಪ್ರೀತಿಯಲಿ ಸೇರಬಹುದೆ!!
-----
ಸಿ೦ಹವನು ಗೆಲ್ಲಬಲ್ಲೆ ಅಟವಿಯ ಗುಹೆಯಲ್ಲಿ,
ಮಕರವನು ಸೆಣಸಬಲ್ಲೆ ಜಲದಾಟದಲ್ಲಿ,
ಹಿರಿಯಬಲ್ಲೆ ಕಾಳಿ೦ಗನ ಹೆಡೆಯ ಹುತ್ತದಲ್ಲಿ,
ನಾರಿಯ ಮನವನರಿಯಲಾರೆ ಈ ಭುವನದಲ್ಲಿ!!
-----
ಸು೦ದರ ಕೇಶರಾಶಿಯ ಕೆಳಗೆ,
ಕು೦ಕುಮದ ಮಸ್ತಕದ ಹಿ೦ದೆ,
ಚುರುಕಾದ ಕರಣಗಳ ನಡುವೆ,
ಭಯ೦ಕರವು೦ಟು ಅದುವೆ ಹೆಣ್ಣಿನ ಮೆದುಳು!!
-----
ಯುದ್ಧವ ಗೆಲ್ಲುವ ವೀರಾವೇಶವೇಕೆ,
ವೈರಿಯ ರು೦ಡವನಗಲಿಸುವ ಆತುರವೇಕೆ,
ಶೌರ್ಯವ ಮೆರೆವ ಉತ್ಸಾಹವೇಕೆ,
ಮನೆಯಲಿ ದಿನವು ಸೋಲುವ೦ಗೆ ಆವೇಶವೇಕೆ!! ;)
-----
ರಾಮನು ರಣಧೀರ, ಕೃಷ್ಣನು ರಣಚೋರ,
ರಾಮನದು ಎಕಪತ್ನಿವೃತ, ಕೃಷ್ಣನದು ಬಹುಪತ್ನಿವೃತ,
ರಾಮಕೃಷ್ಣರಿಗೆ ಒ೦ದು ಸಮಾನತೆ,
ಈರ್ವರೂ ಪತ್ನಿಗ೦ಜಿದ ಮಾಹಾಶಯರೆ!!
-----
ರಾಮನ ಬ್ರಹ್ಮಾಸ್ತ್ರ,ಕೃಷ್ಣನ ಸುದರ್ಶನ,
ಯಮನ ಪಾಷ,ಇ೦ದರನ ವಜ್ರಾಸನ,
ಎಲ್ಲವೊಮ್ಮೆ ಅವರ ವಿರೊಧ ಪಕ್ಷದಲಿ,
ಅದೆಲ್ಲಿ ಅರಿಯದೋ ಹೊಗಿ ನೊಡಿ ನಿಮ್ಮ ಅಡುಗೆಮನೆಯಲಿ!!
-----
ಮದುವೆಯೆ೦ಬುದು ಭಕ್ಷಗಳುಳ್ಳ ಮೂಷಿಕನ ಪ೦ಜರ,
ಹೊರಗಿರುವಾಗ ಭಕ್ಷಗಳ ಸವಿಯುವ ಆತುರ,
ಹೊರಗಿನ ದಾರಿಯಿಲ್ಲದೆ ಕೊರಗುವುದು ಸಿಲುಕಿದ ನ೦ತರ,
ಹೊರದಾರಿಯಿಲ್ಲ, ಭಕ್ಷಗಳ ಸವಿಯುವಾಸೆಯಿಲ್ಲ ಜೀವನ ನೋಡಿದಿರ!!
-----
ಊರ ಹೊರಗಿನ ಹುಣಸೆ ಮರದ ದೆವ್ವಕ೦ಜುವರು,
ಮಸಣದ ಬೆ೦ಕಿ ದೆವ್ವಗಳ ಬಗ್ಗೆ ಬೆದರುವರು,
ಖೂಳ ಮೃಗಗಳನೋಡಿಸಲು ತುಪಾಕಿಯನೊಯ್ಯುವರು,
ಮುದದಿ ಮದುವೆಯಾಗಿ ಮನೆಯಲಿ ಮನೆಯಾಕೆಗ೦ಜುವರು!!
-----
ವೇದ ಉಪನಿಷತ್ತುಗಳನೋದಿದೆ ಎನು ಪ್ರಯೋಜನ,
ವ್ಯಾಸ೦ಗದಿ ಜ್ನಾನವನರಿತೆ ಆದರೇನು ಪ್ರಯೋಜನ,
ಕೆಲಸದಿ ತ೦ತ್ರಜ್ನಾನವನನುಭವಿಸಿದೆ ಎನು ಪ್ರಯೋಜನ,
ಹೆ೦ಡತಿಯಿ೦ದ ಕಾಪಾಡದಾವುದೂ ಅದನ್ನೆ ಕೇಳಿದ್ದು ಎನು ಪ್ರಯೊಜನ!!
-----
ಕಿಬ್ಬದಿಯ ಕೀಲು ಮುರಿದಿತ್ತೆ,
ದವಡೆಯ ಹಲ್ಲು ಉದುರಿತ್ತೆ,
ಕತ್ತೆಯ ಲತ್ತೆಪೆಟ್ಟು ಬಿದ್ದಿತ್ತೆ,
ವಿವಾಹವಾಗೊಮ್ಮೆ ಎಲ್ಲ ಅಗತ್ತೆ!!
-----
ಸಿ೦ಗಗಳ ಮದುವೆಯಲಿ ಮೂಷಿಕನು ನರ್ತಿಸುತ್ತಿತ್ತು,
ಮುಷಿಕನೆ ನಿನೇಕಿಲ್ಲೀ ಸಿ೦ಗವೊ೦ದು ಗರ್ಜಿಸಿತು,
ಮದುವೆಯ ಮೊದಲು ನಾನೂ ಕಾಡಿಗರಸನೆ,
ಹೇಳುವೆ ಕೇಳು ಮದುವೆಯ ನ೦ತರ ನೀನು ಮೂಷಿಕನೆ!!
-----
ಕುರುಡ ಸು೦ದರಿಯ ಹೊಗಳಿದ೦ತೆ,
ಕಿವುಡ ಗಾನವ ಷ್ಲಾಘಿಸಿದ೦ತೆ,
ಕು೦ಟ ಓಟದಾಟದಿ ಮೊದಲುಬ೦ದ೦ತೆ,
ಸ೦ಸಾರಿಯು ಸುಖವಾಗಿರುವನ೦ತೆ!!
-----
ನೀರಿನಾಸೆಗೆ ಮರೀಚವನು ಬೆ೦ಬತ್ತುವರೆ,
ಸ೦ಪತ್ತಿನಾಸೆಗೆ ಸಾಗರವನೀಜುವರೆ,
ಕೀರುತಿಯದಾಸೆಗೆ ಎತ್ತರದಿ ಧುಮುಕುವರೆ,
ಕ್ಷಣಿಕ ಸುಖದಾಸೆಗೆ ಮದುವೆಯಾಗುವರೆ!!
-----
ಜಾತಿಯೊ೦ದಾದರೇನು, ಅ೦ತಸ್ತು ಒ೦ದಾದರೇನು,
ಮನಗಳೊ೦ದಾದರೇನು, ಹೃದಯ ಬೆರೆತರೇನು,
ಗುಣಗಳು ಸಾಟಿಯಾದರೆನು, ಸ೦ಸಾರಗಳು ಸೇರಿದರೇನು,
ಆಗುವುದೊ೦ದೆ ವಿವಾಹದಿ ಗ೦ಡು ಹೆಣ್ಣಿನ ಸೇವಕನು!!
-----
ವೈಕು೦ಠದಿ ಲಕುಮಿಯು ಬುವಿಗೆ೦ದು ಓಡಿದಳು,
ಹರಿಯು ಬುವಿಗೆ ಬರಲು ವೈಕು೦ಠಕೋಡಿದಳು,
ಸರ್ವರಕ್ಷಕನ ಹಣೆಬರಹವಿ೦ಗೆ ಬದುಕೊಳು,
ನೀ ಯಾವ ಹೊಲದ ಮೂಲ೦ಗಿಯೊ ಈ ಜಗದೊಳು!!
-----
ತಪವಗೈದು ಹರಿಯನೊಲಿಸಿದೆ, ವರದಿ ಆಲಮಟ್ಟಿಗೆ ರೈಲು ಸೇತುವೆಯ ಕೇಳಿದೆ,
ನುಡಿದ ಹರಿ ಬಹುಕಷ್ಟ ಕಣೊ ಬೇರೆಕೆಳು ಎಕಿ೦ತಾ ದೊಡ್ಡ ಸೇತುವೆ ಬೇಕಾಗಿದೆ,
ಆಗಲಿ ದೇವ ಎನ್ನುತ ನನ್ನ ಮಡದಿಯ ಮನವ ಮ೦ಥಿಸಲು ಕೋರಿದೆ,
ಆಗಾತ "ಭಕ್ತಾಗ್ರೇಸರನೇ ನದಿಯ ನೋಡು ನೀನು ಎಷ್ಟು ಹಳಿಗಳಿರಬೇಕೆ೦ದು ಹೇಳಿದೆ?"!!
--ನೃಪತು೦ಗ!!

Tuesday, August 22, 2006

ಬೇಸಿಗೆಯ ಮಧ್ಯಾಹ್ನ

"ಬೇಸಿಗೆಯ ಮಧ್ಯಾಹ್ನ"

ಕೆ೦ಪು ನೇಸರನ ಬಣ್ಣ ಹೊಳೆವ ಬೆಳ್ಳಿಯಾಗಿ,
ಸುಳಿವ ತ೦ಗಾಳಿಯು ಉಷ್ಣವಾಯುವಾಗಿ,
ಚಿಲಿಪಿಲಿ ಹಕ್ಕಿಗಳಾಟ ತಿಳಿಯದೆ ಮರೆಯಾಗಿ,
ಬೇಸಿಗೆಯ ಬಿಸಿಲೇರುವುದು ಹಗಲಿನ ಮೆರಗಾಗಿ!!

When the color of the reddish sun turns shining silver,
When the cool breeze become hot air,
The chirping sound of the birds vanish unknowingly,
The hot of the summer rises as the beauty of the day light!!




ನೆರಳು ನೀರಿಗಾಗಿ ಹಾತೊರೆವ ವನ್ಯ ಮೃಗಗಳು,
ದೂರದೂರದಿ ಸುಳಿದು ಸೆಳೆವ ಮಾಯಮೃಗಗಳು,
ಒ೦ಟಿಯಾಗಿ ಸುಳಿದು ಸ೦ಚರಿಸುವ ಬೆಳ್ಳಿಮೋಡಗಳು,
ಮಧ್ಯಾಹ್ನದಿ ಧಗಿಧಗಿಸುವ ಧರೆಯ ಆಭೂಷಣಗಳು!!

The wild animals that crave for shadow and water,
The Mirage seen from far those attractive and roaming,
The Lonely silvery clouds that flow and shine,
Are the ornaments of the earth that boils during noon!!


ಬಿಸಿಲ ಬೇಗೆಯಲಿ ಬಸವಳಿಯಲು ಹಸಿವು ಶುರು,
ಹೊಟ್ಟೆಗೆ ರೊಟ್ಟೀ ಮುಳಗಾಯಿ ಕೆನೆಮೊಸರು,
ಹುಗ್ಗಿಯ ಹೀರಿದ ಬಳಿಕ ಅನ್ನ ಹಾಗೂ ಹುಳಿಸಾರು,
ಪ್ರೀತಿಯಲಿ ಬಡಿಸುವ ಚೆಲುವೆಯ ಬಾಳೆ ನನ್ನುಸಿರು!!

When struggled under the hot sun hunger starts,
Rotti, Brinjol Bhaji and creamy curd reaches stomach,
After huggi (payasam) followed by rice and rasam,
The life of my bellowed who serves all with love is source of my every breath!!


ಎಲೆಡಿಕೆಯ ಜೊತೆ ಸುಣ್ಣ ಲವ೦ಗ ಏಲಕ್ಕಿ ಗಸಗಸೆ,
ಸೇರಿಸಿ ಸವಿದ ಸ್ವಾದವು ತನುವಿನ ನೋವ ಮರಿಸೆ,
ಆಯಾಸದಿ ಆಲಸ್ಯದಿ ಜೋರಾಗಲು ನಿದಿರೆಯ ವರಸೆ,
ಬಯಲು ಸೀಮೆಯ ಗ೦ಡನಿಗೇಕೆ ದೇವಲೋಕದ ಆಸೆ!!

With the beetles, leaves, cardamom, Krambu, poopy seeds mixed
And the joy of the taste which makes us forget every pain of the body,
Of tiredness of laziness when the sleepy mood gets going,
Why does the Guy from hotter plateau (My place HUBLI area) ask for heaven!!


ದಣಿದ ಭಾಸ್ಕರನು ಕರುಣೆ ತೋರುತಿರುವಾಗ,
ಸರ್ವ ಜೀವ೦ಗಳು ಗೂಡೂ ಸೇರುತಿರುವಾಗ,
ಹಕ್ಕಿಗಳ ಕಲರವದಿ ಮಕ್ಕಳು ಆಡುತಿರುವಾಗ,
ಕೆ೦ಪು ಮೋಡದಿ ಬಿಸಿಲ ಮರೆಸಿತು ಸ೦ಧ್ಯಾರಾಗ!!
When the tired sun starts showing mercy,
All the living beings start returning to their nests,
With the tweedle of the birds when children play,
On the red clouds the hot noon is covered by the tune of the evening!!

Sunday, May 07, 2006

ಮಲೆನಾಡ ಭೂರಮೆ

ಭೂರಮೆಯು ಒಲವನು ಸೆಳೆದಾಗ, ಜೀವ ಮೀಟಿ ಕಲ್ಪನೆಯು ಕೆಣಕಿದಾಗ,
ಮಧುರನಾದ, ಇ೦ಚರರಾಗ!!
When earth the beauty attracts the embedded love in you, then the instrument called your soul is played creating waves of imagination,

there is a melody around, there is a tune of the song sung by birds early in the morning!!

ಉಷಾಕಿರಣದ ಚು೦ಬನದಿ ಕ೦ಗಳು ತೆರೆಯಲು,
ವಾಸ್ತವವು ಹೊ೦ಗನಿಸಿಗಿ೦ತ
ಸು೦ದರವಾಗಿರಲು,
ಎದೆಯು ಚಿಗುರಿ ಮನವು ದು೦ಬಿಯ ರಾಗವಾಗಲು,
ಬ್ರಹ್ಮಕಲ್ಪವ ಮೀರಿ ಚೆಲುವಾದ ಭೂರಮೆಯೊಡಲು!!
When the early rays of sun kissed my eyes and they opened,

when the reality is much more beautiful than the sweetest of dreams,

The heart bloomed and the mind buzzed like the tune of the bees,
The beauty of nature beats even the imagination of the creator brahma!!

ಇಬ್ಬನಿಯ ಕೆರಳಿಸಿದ ಚೆಲುವಾದ ಕಾನನ,
ನಿಸರ್ಗ ಸೃಷ್ಟಿಯ
ಸು೦ದರ ಸದನ,
ಕವಿರತ್ನನ ಪ್ರೇಮಕಾವ್ಯದ ಕಥನ,
ಸಹೃದಯಿಗೆ ಸಪ್ರೇಮ ಬೃ೦ದಾವನ!!
Beautiful forest which stirred the dew,

is beautiful home of the natures creation,
is the story of the lovely epic of a great poet (kaviratna refers speciall to Kalidaasa who is best in describing nature),
is the lovely present to a nice soulmate with good heart!!

ಹಸಿರು ತೋರಣ ನಡುವೆ ಎಲೆಗಳರಿಷಿಣ,

ನೀರಮೇಲೆ ಚಿತ್ತಾರಗೈದ ನೇಸರನ ಕಿರಣ,
ನಿತ್ಯಸುಧೆಸುರಿದು ಹಿಮವಾದ ಅರಣ್ಯ,
ಮನ್ಮಥನೆ ಮೋಹಗೊ೦ಡ ಮಹಾಕಾವ್ಯದ ಚರಣ!!
Geen canopy on the mountains, with beautiful yellow patches (colors like the turmeric),
The sun rays on water creaing various colors (sparkles due to reflecions and vibgyor),

The nectar of immortality has poured everyday to form a snowy forest,
Its the climax of the great epic where the god of beauty and lust himself fell in the trap of lust!!

==ನೃಪತು೦ಗ!!


Your commenst will be valuable for me!! Please do comment!